ಹಳ್ಳೂರ .
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಸ್ವಾರ್ಥ ಭಾವನೆ ಬಿಟ್ಟು ಪ್ರಾಮಾಣಿಕವಾಗಿ ದೇಶದ ಹಿತಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿ ಸಮಾಜಕ್ಕೇ ಆದರ್ಶ ಮಹಾನ ವ್ಯಕ್ತಿಗಳಾಗಿದ್ದಾರೆಂದು ಪ್ರಾಚಾರ್ಯರಾದ ವಾಯ್ ಬಿ ಕಳ್ಳಿಗುದ್ದಿ ಹೇಳಿದರು.
ಅವರು ಗ್ರಾಮದ ಸಂತಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಅವರ 155 ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120 ನೇ ಜಯಂತಿ ಆಚರಣೆಯಲ್ಲಿ ಮಾತನಾಡುತ್ತಾ ಮಹಾತ್ಮ ಗಾಂಧೀಜಿ ಅವರು ಸತ್ಯಕ್ಕಾಗಿ ಹೋರಾಡಿದರು. ಲಾಲ ಬಹದ್ದೂರ ಶಾಸ್ತ್ರಿಜೀ ಅವರು ಜೈ ಜವಾನ ಜೈ ಕಿಸಾನ್ ಎಂದು ಮಂತ್ರ ಸಾರಿ ಅನ್ನದಾತರಿಗೆ ಜಯಸಿಗಲು ಸಹಾಯ ಮಾಡಿದ್ದಾರೆ. ಹಣಕ್ಕಾಗಿ, ಅಧಿಕಾರ ಆಸೆಗಾಗಿ ಶ್ರಮಪಡದೆ ಸಮಾಜ ಕಲ್ಯಾಣಕ್ಕಾಗಿ ನಿರಂತರ ಶ್ರಮಿಸಿದ್ದಾರೆ.ಕಾಲೇಜೀನ ಹೆಸರು ಪಂದ್ಯಾವಳಿಗಳಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಬೆಳೆದಿದೆ ನಾವು ಕೂಡಾ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.450 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವುದರಿಂದ ಸಭೆ ಸಮಾರಂಭ ಮಾಡಲು ದೊಡ್ಡದಾದ ಕೊಠಡಿ ಅಥವಾ ಸಮುದಾಯ ಭವನ ನಿರ್ಮಾಣ ಮಾಡಲು ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹೇಳಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭೀಮಶಿ ಮಗದುಮ ಮಾತನಾಡಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರು ದೇಶದ ಎರಡು ರತ್ನಗಳಿದ್ದಂತೆ ಜಗದ ಹೃದಯ ಗೆದ್ದು ಭಾರತೀಯರ ಮನಸಿನಲ್ಲಿ ಅಚ್ಚಳಿಯದೆ ಸದಾಕಾಲ ಶಾಶ್ವತ ವಾಗಿರುವ ಹೆಸರೇ ಇದೊಂದು ಶಕ್ತಿ ಅದಕ್ಕಾಗಿ ಗಾಂಧಿಜಿ ಅವರ ಮೌಲ್ಯಗಳನ್ನು ಅಳವಡಿಸಿಕೊಂಡು ಹೋಗಬೇಕೆಂದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಮಾತನಾಡಿ ಮಹಾತ್ಮ ಗಾಂಧೀಜಿ ತನ್ನ ಸತ್ಯ ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ ಮೂರ್ತಿ. ಅಕ್ಟೋಬರ್ 2 ಎಂಬುದು ಬಾಪು ಅವರ ಚಿಂತನೆ ಆದರ್ಶ ಜೀವನ ಮೌಲ್ಯಗಳನ್ನು ಸ್ಮರಿಸಿ ಅವರಂತೆ ನಡೆಯಲು ಪಣ ತೊಡುವ ದಿನವಾಗಿ ಸತ್ಯ ಶಾಂತಿ ಮತ್ತು ಅಹಿಂಸೆಯ ಮೌಲ್ಯಗಳನ್ನು ಯುವಕರೂ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಮಾತ್ರ ಜೀವನ ಉನ್ನತ ಮಟ್ಟಕ್ಕೆರಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷ ಬಸಪ್ಪ ಸಂತಿ.ಪಿಕೆಪಿಎಸ್ ಅಧ್ಯಕ್ಷ ಸುರೇಶ ಕತ್ತಿ.ಗಿರಮಲ್ಲ ಸಂತಿ ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಈ ಸಮಯದಲ್ಲಿ ಉಪನ್ಯಾಸಕರಾದ ಎಸ್ ಐ ಪತ್ತಾರ. ಎಂ ಎಸ್ ಕುಂಬಾರ. ವಿ ವಿ ಬೆಕ್ಕೇರಿ. ಸರಸ್ವತಿ ರಬಕವಿ. ವಿಶ್ನು ಬಾಗಡಿ .ಅಶ್ವಿನಿ ಬಿರಾದಾರ.ಲಕ್ಷ್ಮಣ ತೇರದಾಳ ಸೇರಿದಂತೆ ವಿದ್ಯಾರ್ಥಿಗಳಿದ್ದರು. ಎಸ್ ಐ ಪತ್ತಾರ ಸ್ವಾಗತಿಸಿ. ವಿ ವಿ ಬೆಕ್ಕೆರಿ ನಿರೂಪಿಸಿ. ವಿ ಜಿ ಬೈರನಟ್ಟಿ ವಂದಿಸಿದರು.