ಸದಾಶಿವನ ಮನಗೆದ್ದ ಚನ್ನಮಲ್ಲ ಮಹಾರಾಜರ ಪುಣ್ಯ ಭೂಮಿ.

Share the Post Now

ಬೆಳಗಾವಿ


ವರದಿ: ರಾಜಶೇಖರ ಶೇಗುಣಸಿ ಮೂಗಳಖೋಡ


ಗುರುವಿನಲ್ಲಿ ಅಛಲವಾದ ಭಕ್ತಿ, ಕಾಯಕ ನಿಷ್ಠೆ ಇದ್ದರೆ ಒಬ್ಬ ಮನುಷ್ಯ ಮಹಾತ್ಮನಾಗುತ್ತಾನೆ ಎನ್ನುವುದಕ್ಕೆ ಜೀವಂತ ಸಾಕ್ಷಿ ಈ ಪುಣ್ಯಭೂಮಿ.

ಮುಗಳಖೋಡ: “ಗುರುವಿನ ಕರುಣೆಯ ಪಡೆಯಬೇಕಾದರೆ ಗರ್ವವವ ಬಿಡಬೇಕು” ಎನ್ನುವ ಕವಿವಾಣಿಯಂತೆ, ಗುರು ಎಂದರೆ ಭವ ಸಾಗರವನ್ನು ದಾಟಿಸಿ ಮುಕ್ತಿ ಮಾರ್ಗದತ್ತ ಸಾಗಿಸುವ ನಾವಿಕನಿದ್ದಂತೆ. ಅಂತಹ ಗುರುವಿನ ಪರಮೋಚ್ಚವಾದ ಅನುಗ್ರಹವನ್ನು ಪಡೆದುಕೊಂಡ ಒಬ್ಬ ಭಕ್ತ ಮಹಾತ್ಮನಾಗಿ ಪೂಜ್ಯನೀಯನಾದ ಗುರುಶಿಷ್ಯರ ಭಾಂದವ್ಯದ ಕಥೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮುಗಳಖೋಡ ಪಟ್ಟಣದ ವಾರ್ಡ್ ಸಂಖ್ಯೆ 16ರ ಗದ್ದುಗಿ ತೋಟದಲ್ಲಿ ಇಂದಿಗೂ ಚಿರನೂತನ.

ಬಬಲಾದಿ ಸದಾಶಿವ ಮಹಾರಾಜರೆಂದರೆ ಸಾಕ್ಷಾತ್ ಶಿವನ ಪರಾವತಾರವಿದ್ದಂತೆ. ಕಾಲ ಜ್ಞಾನ ಎಂಬ ಮಹಾನ್ ಗ್ರಂಥವನ್ನು ಬರೆದಿರುವ ಅವರು ಈ ಜಗತ್ತಿನಲ್ಲಿ ಮುಂದೆ ಆಗುವ ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಅಂತಹ ವಾಕ್ ಸಿದ್ಧಿ ಪುರುಷರು ಬಬಲಾದಿ ಸದಾಶಿವ ಅಜ್ಜನವರು. ಸದಾಶಿವ ಅಜ್ಜನವರು ತಮ್ಮ ಬಿಳಿಯ ಬಣ್ಣದ ಕುದುರೆಯನ್ನು ಹತ್ತಿಕೊಂಡು ದೇಶ ಸಂಚಾರ ಮಾಡುವುದು ವಾಡಿಕೆ. ಹೀಗೆ ಸಂಚರಿಸುತ್ತ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮುಗಳಖೋಡ ಪಟ್ಟಣ ಗದ್ದುಗಿ ತೋಟಕ್ಕೆ ಬರುತಿದ್ದರಂತೆ. ಹೀಗೆ ಬಂದಾಗ ಅವರ ಸೇವೆಯನ್ನು ಶಿರಸಾ ವಹಿಸಿ ಮಾಡುತಿದ್ದೋರು ಇಲ್ಲಿಯ ನಿವಾಸಿ ಚನ್ನಮಲ್ಲ ಹೊಸಪೇಟಿಯವರು. ಒಂದು ದಿನ ಬಬಲಾದಿ ಅಜ್ಜನವರು ತೀರ್ಥ (ಸಾರಾಯಿ)ವನ್ನು ಸೇವಿಸುತ್ತಾ ಕುಳಿತಾಗ ತೀರ್ಥ ಖಾಲಿಯಾದೆ. ಆ ಸದಾಶಿವ ಅಜ್ಜನವರು ” ಎ ಚನ್ನಮಲ್ಲ ತೀರ್ಥ ಖಾಲಿಯಾಗಿದೆ ತೆಗೆದುಕೊಂಡು ಬಾ ಎಂದು ” ಹೇಳಿದಾ ಆಗ ಚನ್ನಮಲ್ಲ ” ಅಜ್ಜಾರ ತೀರ್ಥ ಖಾಲಿಯಾಗಿದೇರಿ ಬುದ್ದಿ ” ಎಂದಾಗ, ” ಏ ಚನ್ನಮಲ್ಲ ಏನೋ ನೀನು ಪಕ್ಕದಲ್ಲೇ ತೀರ್ಥ ತುಂಬಿ ತುಳಕ್ತಾ ಇದೆಯಲ್ಲೋ ಹೋಗಿ ತಗೊಂಡು ಬಾ ” ಎಂದು ಪಕ್ಕದಲ್ಲೇ ಇದ್ದ ಬಾವಿಯ ಕಡೆಗೆ ಕೈ ಮಾಡಿ ತೋರಿಸಿದಾಗ, ಗುರುವಿನ ವಾಣಿಗೆ ಮರು ಮಾತನಾಡದ ಚನ್ನಮಲ್ಲ ” ತಕ್ಷಣ ಹೋಗಿ ಬಾವಿಗೆ ಇಳಿದು ಒಂದು ಕೊಡ ನೀರನ್ನು ತಂದು ಕೊಟ್ಟರಂತೆ. ಗುರುವಿನ ಹಸ್ತ ಸೋಕುತಿದ್ದಂತೆ ಬಾವಿಯ ನೀರು ತೀರ್ಥವಾಗಿ ಪರಿಣಮಿಸಿತಂತೆ. ಆ ತೀರ್ಥ ಸೇವನೆ ಮಾಡಿದ ಬಳಿಕ ಸದಾಶಿವ ಅಜ್ಜನವರು ಭಕ್ತನ ಅಂತ್ಕರಣವನ್ನು ಶೋಧಿಸಿ ನೋಡಲೆಂದು ವಾಂತಿಯನ್ನು ಮಾಡಿಕೊಂಡರಂತೆ. ತಕ್ಷಣ ಅದನ್ನು ತಮ್ಮ ಬೊಗಸೆಯಲ್ಲಿ ಹಿಡಿದ ಚನ್ನಮಲ್ಲ ಹೊಸಪೇಟಿ ಯಾವುದೇ ಯೋಚನೆ ಮಾಡದೆ ಗುರು‌ ಪ್ರಸಾದ ಎಂದು ಆ ವಾಂತಿಯನ್ನು ಗಟ ಗಟನೆ ಕುಡಿದರಂತೆ ಇದನ್ನು ಗಮನಿಸಿದ ಸದಾಶಿವ ಮಹಾರಾಜರು, ನೀನು ನನ್ನ ವಾಂತಿಯನ್ನ ಗುರು ಪ್ರಸಾದವೆಂದು ನಿಶ್ಕಲ ಮನಸ್ಸಿನಿಂದ ಸೇವನೆ ಮಾಡಿದ್ದೀಯ. ಇಂದಿನಿಂದ ನೀನು ಕೇವಲ ಚನ್ನಮಲ್ಲಪ್ಪ ಅಲ್ಲ ಭವಿಷ್ಯ ವಾಣಿಯನ್ನು ಸಾರುವ ಚನ್ನಮಲ್ಲ ಮಹಾರಾಜನಾಗಿ ಕೀರ್ತಿವಂತನಾಗಿ ಬಾಳು ಎಂದು ಹೃದಯ ತುಂಬಿ ಆಶೀರ್ವದಿಸಿದರಂತೆ. ಸದಾಶಿವ ಮಹಾರಾಜರು ಕುಳಿತ ಸ್ಥಾನ ಅವರ ಗದ್ದುಗೆ (ದೇವಸ್ಥಾನ) ನಿರ್ಮಾಣ ವಾಗಿರುವುದರಿಂದ ಅಂದಿನಿಂದ ಈ ಪುಣ್ಯಭೂಮಿಗೆ ಗದ್ದುಗೆ ತೋಟವೆಂದು ನಾಮಕರಣವಾಗಿದೆ. ಪಕ್ಕದಲ್ಲಿಯೇ ಚನ್ನಮಲ್ಲ ಮಹಾರಾಜರ ದೇವಸ್ಥಾನವು ನಿರ್ಮಾಣ ಹಂತದಲ್ಲಿದೆ.

ಅಂದಿನಿಂದ ಚನ್ನಮಲ್ಲ ಮಹಾರಾಜರು ಅದೇ ಸ್ಥಳದಲ್ಲಿ ಸದಾಶಿವ ಅಜ್ಜನವರ ದೇವಸ್ಥಾನ ನಿರ್ಮಿಸಿ ಪೂಜಿಸುತ್ತ ತಮ್ಮ ಜೀವಿತದ ಕಾಲ ಕಳೆದರಂತೆ. ಕೇಲವರಿಗೆ ಶಾಪ ಕೇಲವರಿಗೆ ಆಶೀರ್ವದಿಸಿದ ಚನ್ನಮಲ್ಲ ಮಹಾರಾಜರ ವಾಣಿ ಸತ್ಯವಾಗಿವೆ ಎನ್ನುವುದು ಸ್ಥಳೀಯರ ಗಾಢವಾದ ನಂಬಿಕೆ.

ಸುಳ್ಳೆಂದವರಿಗೆ ಮೂರು ಏಣಿಯ ಗುಟಾ:
ಸದಾಶಿವ ಅಜ್ಜನವರು ತೀರ್ಥವನ್ನಾಗಿ ಪರಿವರ್ತಿಸಿದ್ದ ಬಾವಿಯಲ್ಲಿ ಇಂದಿಗೂ ಯಾರು ಇಳಿದು ಸ್ನಾನ ಮಾಡುವುದಿಲ್ಲ. ಇದೆಲ್ಲಾ ಮೂಢನಂಬಿಕೆ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಮುಗಳಖೋಡ ಪಟ್ಟಣದ ಗದ್ದುಗಿ ತೋಟಕ್ಕೆ ಮದುವೆಗೆಂದು ಆಗಮಿಸಿದ್ದ ಮಹಿಳೆಯೊರ್ವಳು ಬಾವಿಗೆ ಇಳಿದು ನೀರನ್ನ ಮುಟ್ಟಿ ಮೇಲೆ ಬರುವ ವೇಳೆ ಆ ಮಹಿಳೆಯ ಎರಡು ಕಣ್ಣುಗಳು ಹೋಗಿ ಅಂಧಳಾದಾಗ, ತನ್ನ ತಪ್ಪಿಗೆ ಶಿಕ್ಷೆ ಎನ್ನುವಂತೆ ಆರು ವಾರಗಳ ಪರಿಯಂತರ ದಂಡ್ವತ್ ಪ್ರಣಾಮಗಳನ್ನು ಹಾಕಿದಾಗ ಅ ವಳಿಗೆ ಮತ್ತೆ ಕಣ್ಣು ಕಾಣಲು ಪ್ರಾರಂಭಿಸಿದವು ಎಂಬ ಘಟನೆಯ ಬಗ್ಗೆ ಸ್ಥಳೀಯರು ಹೇಳುತ್ತಾರೆ.

ಅಂದಿನಿ ಇಂದಿನವರೆಗೂ ಪುಣ್ಯಕ್ಷೇತ್ರವಾಗಿರುವ ಮುಗಳಖೋಡದ ವಾರ್ಡ್ ಸಂಖ್ಯೆ 16 ಗದ್ದುಗೆ ತೋಟ ಗುರುಶಿಷ್ಯರ ಕರ್ಮ ಭೂಮಿಯಾಗಿ ಪರಿವರ್ತನೆಯಾಗಿದೆ. ಅಂದಿನಿಂದ ಪ್ರತಿ ವರ್ಷ ಮಹಾಶಿವರಾತ್ರಿಯ ದಿನದಂದು ಶ್ರೀ ಸದಾಶಿವ ಹಾಗು ಚಂದ್ರವ್ವ ತಾಯಿ ಜಾತ್ರಮಹೋತ್ಸವವನ್ನು ಆಚರಿಸಿದರೆ, ಹೋಳಿ ಹುಣ್ಣಿಮೆಯ ದಿನ ಶ್ರೀ ಚನ್ನಮಲ್ಲ ಮಹಾರಾಜರ ಜಾತ್ರಾ ಮಹೋತ್ಸವನ್ನು ಆಚರಣೆ ಮಾಡುತ್ತಾ ಬರುತ್ತಿದ್ದಾರೆ. ಜಾತ್ರಾ ಮಹೋತ್ಸವದ ನಿಮಿತ್ಯ ರೊಟ್ಟಿ ಬುತ್ತಿ ಜಾತ್ರೆ, ದಾಸೋಹ ಹಾಗು ವಿವಿಧ ಭಜನಾ ಕಲಾ ತಂಡದವರಿಂದ ಶಿವ ಜಾಗರಣೆ ಕಾರ್ಯಕ್ರಮಗಳು ಜರುಗಿದವು. ರೊಟ್ಟಿ ಬುತ್ತಿ ಜಾತ್ರೆಗೆ ಹುಕ್ಕೇರಿಯ ಶ್ರೀ ಸದಾಶಿವ ಅಜ್ಜನವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ : ಸದಾಶಿವ ಅಜ್ಜನವರ ಪುಜಾರಿ ಶ್ರೀಶೈಲ ಹೊಸಪೇಟಿ, ವಾರ್ಡ್ ಸದಸ್ಯೆ ಪ್ರತಿಭಾ ಹೊಸಪೇಟಿ, ಡಾ. ಬಸವರಾಜ ಹೊಸಪೇಟಿ, ಚಂದು ಹೊಸಪೇಟಿ, ಈರಪ್ಪ ಉಗಾರ, ಮಲ್ಲಪ್ಪ ಆಸಂಗಿ, ಹನಮಂತ ಹೊಸಪೇಟಿ, ಚಿದು ಬಸ್ತವಾಡ, ಅಶೋಕ ಹೊಸಪೇಟಿ,‌ ಲಕನ್ ಹೊಸಪೇಟಿ, ಶಿವು ಹೊಸಪೇಟಿ, ಭೀಮಪ್ಪ ಉಗಾರ, ಮಹಾದೇವ ಹೊಸಪೇಟಿ, ಪ್ರಭು ಹೊಸಪೇಟಿ, ಕಿರಣ ಬಸ್ತವಾಡ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!