ಗಂಗಾವತಿ :ಕಿಷ್ಕಿಂದ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಗಂಗಾವತಿಯ ಚಾರಣ ಬಳಗದ ಸದಸ್ಯರು,ಹಿಂದುಳಿದ ವರ್ಗ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಅವರನ್ನು ಮಂಗಳವಾರ ಭೇಟಿಯಾಗಿ ಒತ್ತಾಯಿಸಿದರು.
ಬೆಣಕಲ್ ಬೆಟ್ಟಕ್ಕೆ ರಸ್ತೆ ನಿರ್ಮಾಣ,ಕುಡಿಯುವ ನೀರಿನ ವ್ಯವಸ್ಥೆ ,ರಕ್ಷಣಾ ಸಿಬ್ಬಂದಿ ನಿಯೋಜನೆ,ಸಿ.ಸಿ.ಕ್ಯಾಮರಾ ಅಳವಡಿಕೆ,ಕುಮಾರ ರಾಮ ಬೆಟ್ಟಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಬಳಗದ ಸದಸ್ಯರಾದ ಡಾ.ಶಿವಕುಮಾರ ಮಾಲಿ ಪಾಟೀಲ್, ಪತ್ರಕರ್ತ ಮಂಜುನಾಥ ಗುಡ್ಲಾನೂರ್
ಹರನಾಯಕ,ವೀರೇಶ ಅಂಗಡಿ ಬೆಣಕಲ್,ಪ್ರಹ್ಲಾದ್ ಕುಲಕರ್ಣಿ,ವಿಜಯ ಬಳ್ಳಾರಿ,ಸಿಬಿಎಸ್ ಚ್ಯಾನಲ್ ಪ್ರತಿನಿಧಿ ಮಲ್ಲಿಕಾರ್ಜುನ ಸಚಿವರನ್ನು ಕೋರಿದರು.
ಜೊತೆಗೆ ಕುಮಾರ ರಾಮನ ಬೃಹತ್ ಮೂರ್ತಿ, ಗಂಗಾವತಿಯಿಂದ ವಾಣಿಭದ್ರೇಶ್ವರ ಬೆಟ್ಟಕ್ಕೆ ಸಿಮೆಂಟ್ ರಸ್ತೆ ,ಅಂಜನಾದ್ರಿ ಬೆಟ್ಟಕ್ಕೆ ಸಿಬ್ಬಂದಿ ನೇಮಿಸುವ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಶೈಲಜಾ ಹಿರೇಮಠ,ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಗಂಗಾಧರ ಕಲ್ಲಬಾಗಿಲ ಮಠ ಕನಕಗಿರಿ, ಶಶಿಧರ ಗೌಡ ಮಾಲಿ ಪಾಟೀಲ್ ಹೇರೂರ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಡಾ.ಮಾಲಿ ಪಾಟೀಲ್ ಹಾಗೂ ಅಶೋಕಸ್ವಾಮಿ ಹೇರೂರ,ಸಚಿವರಿಗೆ ಪುಸ್ತಕಗಳನ್ನು ನೀಡಿ ಗೌರವಿಸಿದರು.





