ನ್ಯಾಯಬೆಲೆ ಅಂಗಡಿಗಳಲ್ಲಿ ಅಳತೆಯಲ್ಲಿ ಮೋಸ: ಆಹಾರ ನೀರಿಕ್ಷರ ಕಛೇರಿ ಸ್ಥಳಾಂತರಿಸಿ.

Share the Post Now

ಸಿರವಾರ,

ನ್ಯಾಯಬೆಲೆ ಅಂಗಡಿಗಳಲ್ಲಿ  ಸಾರ್ವಜನಿಕರಿಗೆ ನೀಡುವ ಅಕ್ಕಿ, ಗೋದಿ ಇನ್ನಿತರ ಆಹಾರ ಪದಾರ್ಥಗಳು ನೀಡುವಾಗ ತೂಕದಲ್ಲಿ ಹಾಗು ವಿತರಣೆಯಲ್ಲಿ ಅನ್ಯಾಯವಾಗುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಜಾಣ ಮೌನ ವಹಿಸಿದ್ದನ್ನು ಖಂಡಿಸಿ ಹಾಗು ಆಹಾರ ನಿರೀಕ್ಷಕರ ಕಚೇರಿ, ಅಧಿಕಾರಿಯನ್ನುನೇಮಕಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯದಲಿತ ಸಂಘರ್ಷ ಸಮಿತಿ (ನಾಗವಾರ ಬಣ)ವತಿಯಿಂದ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಿಯಮಗಳ ಪ್ರಕಾರ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಬಳಕೆ ಮಾಡಬೇಕು. ಆದರೆ ಡಬ್ಬಿಗಳನ್ನು ಬಳಸಿ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ಅಳತೆಯಲ್ಲಿ ಮತ್ತು ತೂಕದಲ್ಲಿ ಗ್ರಾಹಕರಿಗೆ ಅನ್ಯಾಯ ವೆಸಗಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು

ಮೌನವಹಿಸಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿದೆ. ಪಡಿತರ ಕಾರ್ಡ್ ಪಡೆಯಲು, ತಿದ್ದುಪಡಿ ಮಾಡಿಸಲು ದೂರದ ಮಾನ್ವಿನಗರಕ್ಕೆ ತೆರಳಬೇಕಿರುವುದರಿಂದ ಕೂಡಲೇ ಆಹಾರ ನಿರೀಕ್ಷಕರ ಕಚೇರಿಯನ್ನು ಮತ್ತು ಆಹಾರ ನಿರೀಕ್ಷರರನ್ನು ನೇಮಕ ಮಾಡಬೇಕು.

ಕೂಡಲೇ ತೂಕದಲ್ಲಿ ಮೋಸ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಗೊಳಿಸಬೇಕು ಎಂಬುದುಸೇರಿದಂತೆ ವಿವಿಧಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು. ನಮ್ಮ ಮನವಿಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ

ಕಚೇರಿಯ ಮುಅಂಗಡಿಗಳಿ ಹೂಡಲಾಗುತ್ತದೆ ಎಂದರು. ಸಂಘಟನೆಯತಾಲೂಕು ಸಂಚಾಲಕ ಜೆ.ಪ್ರಕಾಶ, ಮೌನೇಶ ಮರಾಟ, ಸಾಬಣ್ಣ, ರಾಜಪ್ಪ, ಹನುಮೇಶ ಭಜಂತ್ರಿ ಸೇರಿದಂತೆ ಇತರರು ಇದ್ದರು.

Leave a Comment

Your email address will not be published. Required fields are marked *

error: Content is protected !!