ಬೆಳಗಾವಿ.
ಭಾರತ ಸರ್ಕಾರದ ರಾಷ್ಟ್ರೀಯ ಅರಿಶಿನ ಮಂಡಳಿಯ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಬೆಳಗಾವಿ ಜಿಲ್ಲೆಯ ಕುಡಚಿ ಮತಕ್ಷೇತ್ರದ ಮುಗಳಖೋಡ ಪುರಸಭೆಯ ಸದಸ್ಯರಾದ ಚೇತನ್ ಯಡವಣ್ಣವರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ ವಾಯ್ ವಿಜಯೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ಪಿ ರಾಜೀವ ಅವರ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರದಿಂದ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಅರಿಶಿಣ ಮಂಡಳಿಯ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿಯವರು ಸನ್ಮಾನಿಸಿ ಆಶೀರ್ವದಿಸಿದರು.
ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಕೆಎಲ್‌ಇ ಕಾರ್ಯಧ್ಯಕ್ಷ ಪ್ರಭಾಕರ ಕೋರೆ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೋಲ್ಪೆ, ಶಶಿಕಾಂತ ಗುರೂಜಿ.ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ವಿಪ ಸದಸ್ಯ ಮಹಾಂತೇಶ ಕವಟಗಿಮಠ, ಉದ್ಯಮಿ ಮಹೇಶ ಭಾತೆ, ಭಾಜಪ ಚಿಕ್ಕೋಡಿ ಜಿಲ್ಲಾಧ್ಯಕ್ಷಸತೀಶ ಅಪ್ಪಾಜಿಗೋಳ, ಕುಡಚಿ ಮತಕ್ಷೇತ್ರದ ಭಾಜಪ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾದವ, ಮಲ್ಲಿಕಾರ್ಜುನ ಖಾನಗೌಡರ, ಬಸನಗೌಡ ಆಸಂಗಿ, ಶಿವಾನಂದ ಮೆಕ್ಕಳಕಿ, ನಿಂಗಪ್ಪ ಪಕಾಂಡಿ, ಹಾರೂಗೇರಿ ಪುರಸಭೆಯ ಅಧ್ಯಕ್ಷ ಸಂತೋಷ ಲಾಳಿ, ಮುಗಳಖೋಡ ಪುರಸಭೆಯ ಅಧ್ಯಕ್ಷ ಶಾಂತವ್ವ ಗೋಕಾಕ.ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ.ಲಕ್ಷ್ಮಣ ಕೂಡಲಗಿ, ಮಲ್ಲಿಕಾರ್ಜುನ ತೇಲಿ, ರಾಜಶೇಖರ ಖಣದಾಳೆ, ದತ್ತಾ ಸಣ್ಣಕ್ಕಿ, ಆಗ್ರಾಣಿ ಶೇಗುಣಶಿ, ಕೃಷ್ಣರಾವ ನಾಯಿಕ ಸೇರಿದಂತೆ ಭಾರತೀಯ ಜನತಾ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು, ಎಲ್ಲಾ ಅರಿಶಿಣ ಬೆಳೆಯ ರೈತ ಬಾಂಧವರು ಅಭಿನಂದಿಸಿದ್ದಾರೆ.





