ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ತಪ್ಪಿದ್ದರಿಂದ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಕಾರಿಗೆ ಮುತ್ತಿಗೆ ಹಾಕಿದ ಪ್ರಸಂಗ ಇಂದು ನಡೆದಿದೆ.
ಲಕ್ಷ್ಮಣ ಸವದಿ ಬೆಂಬಲಿಗರು ರಾಜೇಶ ನೇರ್ಲಿ ಕಾರಿಗೆ ಗುದ್ದಿ, ಅವಾಚ್ಯ ಪದಗಳಿಂದ ನಿಂದಿಸುವ ದೃಶ್ಯ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಮನೆಯ ಮುಂದೆ ನಡೆದಿದೆ. ನಮ್ಮ ನಾಯಕ ಣ ಸವದಿ ಅವರಿಗೆ ಯಾಕೆ ಟಿಕೆಟ್ ಕೈ ತಪ್ಪಿಸಿದ್ದು ಎಂಬುದಕ್ಕೆ ಲಕ್ಷ್ಮಣ ಉತ್ತರ ಕೊಡಿ’ ಎಂದು ಪಟ್ಟು ಹಿಡಿದರು.
ಸವದಿ ಮನೆಯಲ್ಲಿ ರಾಜೇಶ ನೇರ್ಲಿ ಅವರನ್ನು ಲಕ್ಷ್ಮಣ ಸವದಿ ಬೆಂಬಲಿಗರು ಎಳೆದಾಡಿದ್ದಾರೆ.ಕಾರ್ಯಕರ್ತರ ಗದ್ದಲಕ್ಕೆ ಬೆದರಿ ರಾಜೇಶ ನೇರ್ಲಿ ಅವರು ಸವದಿ ಮನೆಯಿಂದ ತಕ್ಷಣ ಕಾಲ್ಕಿತ್ತಿದ್ದಾರೆ.