ಚಿಕ್ಕೋಡಿ:ಕಾಂಗ್ರೆಸ್ ಸರ್ಕಾರ ಮಹತ್ವಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು.
ಚಿಕ್ಕೋಡಿ ಪಟ್ಟಣದ ಡಾ! ಬಿ.ಆರ್.ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಗಣೇಶ ಹುಕ್ಕೇರಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ಬಳಿಕ ಮಾತನಾಡಿ ಶಾಸಕ ಗಣೇಶ ಹುಕ್ಕೇರಿ ಕಾಂಗ್ರೆಸ್ ಸರ್ಕಾರ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುತ್ತಾ ನುಡಿದಂತೆ ನಡೆದುಕೊಂಡು ಬರುತ್ತಿದೆ.ಈ ಯೋಜನೆಯಿಂದ ಪ್ರತಿ
ಮನೆಯ ಯಜಮಾನಿಯ ಖಾತೆಗೆ 2000 ರೂಪಾಯಿ ವರ್ಗಾವಣೆ ಮಾಡಲಾಗಿದೆ.ಇದು ಮನೆಯ ಯಜಮಾನಿಗೆ ಕುಟುಂಬ ನಿರ್ವಹಣೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.೫ ಗ್ಯಾರಂಟಿಗಳಲ್ಲಿ ೪ ಗ್ಯಾರಂಟಿಗಳನ್ನು ಈಡೇರಿಸಲಾಗಿದೆ.ಇನ್ನೊಂದು ಗ್ಯಾರಂಟಿಯನ್ನು ಸದ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಈ ಸಂಧರ್ಭದಲ್ಲಿ ಉಪವಿಭಾಗಧಿಕಾರಿ ಮಾಧವ್ ಗಿತ್ತೆ,ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ,ತಹಶಿಲ್ದಾರ ಚಿದಬರಂ ಕುಲಕರ್ಣಿ,ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡೋಣಿ,ಸಿಡಿಪಿಓ ಭಾರತಿ ಕಾಂಬಳೆ,ಪುರಸಭೆ ಹಿರಿಯ
ಸದಸ್ಯರಾದ ಶ್ಯಾಮ ರೇವಡೆ,ರಾಮಾ ಮಾನೆ,ಗುಲಾಬ ಹುಸೇನ ಬಾಗವಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಸಾಬೀರ ಜಮಾದಾರ,ಈರ್ಫಾನ ಬೇಪಾರಿ,ಅನೀಲ ಮಾನೆ,ವರ್ಧಮಾನ ಸದಲಗೆ,ಸಂದೀಪ ಶೇರಖಾನೆ,ಶ್ರೀಮಂತ ಮಾಳಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.