ಬೆಳಗಾವಿ.
ವರದಿ :ತುಕಾರಾಂ ಮದಳೇ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶೇಗುಣಸಿ ವಿರಕ್ತ ಮಠದ ಶ್ರೀ. ಮ ನಿ ಪ್ರ ಸ್ವ ಮಹಾಂತಪ್ರಭು ಮಹಾಸ್ವಾಮಿಗಳು ಮಾತನಾಡಿ ಸಪ್ತರ್ಷಿಗಳ ತ್ಯಾಗ ಜೀವನ ಹಾಗೂ ಕೆಎಲ್‌ಇ ಸಂಸ್ಥೆಯ ಸ್ಥಾಪನೆಯಾದ ಪರಿಶ್ರಮವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಆಧುನಿಕ ತಂತ್ರದಜ್ಞಾನದ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಕುಮಾರ ಎಸ್ ಕೋರೆ ವಹಿಸಿಕೊಂಡಿದ್ದರು,ಸ್ಥಾನಿಕ ಆಡಳಿತ ಮಂಡಳಿಯ ಎಲ್ಲ ಸದಸ್ಯರು. ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಶ್ರೀಮತಿ. ಜೆ. ಎಸ್ ತಮಗೊಂಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮತ್ತು ಸಂತೋಷ ಖೋತ ನಿರೂಪಿಸಿ, ಮಂಜುನಾಥ ಕೋಳೆಕರ ವಂದಿಸಿದರು.