ಬೆಳಗಾವಿ : ವಿಧಾನ ಪರಿಷತ್ತು ಸಭಾಪತಿˌಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿಯವರು ನೆರೆಯ ಅಥಣಿ ತಾಲ್ಲೂಕಿನ ಕಟ್ಟಕಡೆಯ ಚಿಕ್ಕೂಡ ಗ್ರಾಮಕ್ಕೆ ಆಗಮಿಸಿ ಗ್ರಾಮ ಪ್ರಗತಿಪಥದತ್ತ ಸಾಗುತ್ತಿರುವುದರ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಅವರು ಸ್ಥಳಿಯ ಪ್ರಗತಿಪರ ರೈತ ಮುಖಂಡ ಪರಮೇಶ್ವರ ಮುಳ್ಳೂರ ಅವರ ಮನೆಗೆ ಇತ್ತೀಚೆಗೆ ಭೆಟ್ಟಿ ನೀಡಿದಾಗ ಅವರ ಅಪಾರ ಅಭಿಮಾನಿಗಳಿಂದ ಗೌರವ ಸತ್ಕಾರ ಸ್ವೀಕರಿಸಿದರು.ನಂತರ ಸರಕಾರಿ ಪ್ರೌಢ ಶಾಲೆˌಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆಕಸ್ಮಿಕ ಸಂದರ್ಶನ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಾರ್ಚ 2023 ರ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ 596 ಅಂಕಗಳನ್ನು ಗಿಟ್ಟಿಸಿ ಪ್ರಥಮ ಸ್ಥಾನ ಪಡೆದ ಕು. ಕಾವೇರಿ ಮುತ್ತಪ್ಪ ಸನದಿ ವಿಧ್ಯಾರ್ಥಿನಿಯನ್ನು ಸನ್ಮಾನಿಸಿ ಶುಭ ಹಾರೈಸಿದರು.
ಊರಿನ ಗಣ್ಯರುˌಯುವಕರುˌತಾಲೂಕಾ ಮಟ್ಟದ ಅಧಿಕಾರಿಗಳು ˌಸಂಘಗಳ ಪದಾಧಿಕಾರಿಗಳು,ಅಥಣಿ ತಾಲೂಕಾ ದಂಡಾಧಿಕಾರಿ ಡಿ.ಎಸ್ ಕಡಕಭಾವಿˌಶಿರಸ್ತೆದಾರ ಮಹಾದೇವ ಬಿರಾದಾರ ಪಾಟೀಲ, ˌಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರˌಶಿವಾನಂದ ಮೆನಸಂಗಿˌಅಶೋಕ ಕೋಗಿಲೆˌಭೂದಾನಿ ಎಮ್.ಬಿ.ಪಾಟೀಲˌಸಮಾಜ ಸೇವಕ ಗುಂಡು ರಡ್ರಟ್ಟಿˌಭೀಮಣ್ಣ ಐನಾಪೂರ ˌ ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ಪಾಟೀಲˌ ಮತ್ತು ಸದಸ್ಯರುˌಗ್ರಾಮ ಪಂಚಾಯತ ಸದಸ್ಯರುˌರೈತರುˌಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯ ರವೀಂದ್ರ ಪಾಟೀಲ ಸ್ವಾಗತಿಸಿದರು.ಆರ್.ಎಮ್.ಪೂಜೇರಿ ವಂದಿಸಿದರು.
*ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*





