ವಿವಿಧ ಇಲಾಖೆಗಳಿಂದ ನಡೆಸುತ್ತಿರುವ ಶಿಶುಪಾಲನ ಕೇಂದ್ರಗಳು ಹಾಗೂ ಶಾಲಾಪೂರ್ವ ಶಿಕ್ಷಣ ತರಗತಿಗಳನ್ನು ಕೈಬಿಡಬೇಕು..

Share the Post Now

ಬೆಳಗಾವಿ

ಅಂಗನವಾಡಿ ಕೇಂದ್ರಗಳ ದುರ್ಬಲಗೊಳಿಸುವ ಕಾರ್ಯ ಸರಿಯಲ್ಲ..

ಕಾರ್ಯಕರ್ತೆಯರ ಮನವಿ..

ಬೆಳಗಾವಿ : ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಮೂಲಕ ತಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ..

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿಯಲ್ಲಿ ಕಳೆದ 48 ವರ್ಷಗಳಿಂದ ಶೂನ್ಯದಿಂದ ಆರು ವರ್ಷದ ವಯೋಮಾನದ ಮಕ್ಕಳಿಗಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ, ಲಾಲನೆ ಪಾಲನೆ, ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ಇತ್ಯಾದಿ ಸೇವೆಗಳನ್ನು ನೀಡುತ್ತಾ ಬರುತ್ತಿದ್ದೇವೆ..

ಆದರೆ ಈಗ ಸರ್ಕಾರದ ವಿವಿಧ ಇಲಾಖೆಗಳು, ಎಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆಯೋ ಅದೇ ಪ್ರದೇಶಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಹಾಗೂ ಶಾಲಾ ಪೂರ್ವ ತರಗತಿಗಳನ್ನು ಪ್ರಾರಂಭಿಸುವದರಿಂದ ಅಂಗನವಾಡಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಕಾರಣ ಈ ಕಾರ್ಯವನ್ನು ಸರ್ಕಾರ ತಕ್ಷಣ ಕೈ ಬಿಡಬೇಕು..

ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಆಶ್ರಯದಲ್ಲಿ, ಸರ್ಕಾರಿ ಶಾಲೆಗಳಲ್ಲಿ, ತರಗತಿ ನಡೆಸಲು ಆದೇಶ ನೀಡಿದ್ದು, ಎಲ್ ಕೆಜಿ ಕೂಡಾ ನಡೆಸಲು ಸೂಚಿಸಿದೆ ಎಂಬ ಮಾಹಿತಿ ಇದೆ,

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ಯ, ಬಿಬಿಎಂಪಿ, ಹೀಗೆ ಮುಂತಾದ ಸ್ಥಳಗಳಲ್ಲಿ ಶಿಶುಪಾಲನಾ ಕೇಂದ್ರ ಸ್ಥಾಪಿಸಿ, ಅಂಗನವಾಡಿಗಳನ್ನು ದುರ್ಬಲ ಮಾಡಿ, ಮುಚ್ಚಿಸುವ ಯತ್ನ ನಡೆಯುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಳಲನ್ನು ಮನವಿ ಮೂಲಕ ತಿಳಿಸಿದ್ದಾರೆ..

ಅಂಗನವಾಡಿ ಕೇಂದ್ರಗಳಲ್ಲಿ ಈಗಾಗಲೇ ಮಕ್ಕಳಿಗೆ ಬೇಕಾದ ಸೌಲಭ್ಯ ನೀಡುತ್ತಿರುವಾಗ, ಅದೇ ಸೇವೆ ಬೇರೆ ಕಡೆ ನೀಡಿ, ಸರ್ಕಾರದ ಹಣವನ್ನು ಪೊಲುಮಾಡುತ್ತಿರುವ ಈ ಧೋರಣೆ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು..

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಹೆಚ್ಚಿಸಬೇಕು ಮತ್ತು ನಿವೃತ್ತರಿಗೆ ಇಡಗಂಟು 3 ಲಕ್ಷ ರೂಪಾಯಿ ನೀಡುವ ಸರ್ಕಾರದ ಭರವಸೆಯನ್ನು ಕೂಡಲೇ ಈಡೇರಿಸಬೇಕು ಎಂದು ತಮ್ಮ ಮನವಿಯಲ್ಲಿ ಕೇಳಿಕೊಂಡಿದ್ದಾರೆ..

Leave a Comment

Your email address will not be published. Required fields are marked *

error: Content is protected !!