ಬೆಳಗಾವಿ
ರಾಯಬಾಗ: ತಾಲೂಕಿನ ಹಾಲಶಿರಗೂರದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಕ ಭರಮು ಪೂಜೇರಿಯವರು ಮಕ್ಕಳು ಜೀವನದಲ್ಲಿ ಒಳ್ಳೆಯ ಗುರಿಯನ್ನು ಇಟ್ಟುಕೊಂಡು ಶ್ರದ್ದೆ ಪ್ರಾಮಾಣಿಕತೆಯಿಂದ ಅಭ್ಯಾಸ ಮಾಡಲು ಹೇಳಿದರು. ವಿದ್ಯಾರ್ಥಿಗಳು ಶಿಕ್ಷಕರ ಪಾಠ ಪ್ರವಚನಗಳನ್ನು ಶೃದ್ದೆಯಿಂದ ಆಲಿಸಿ ಅರ್ಥೈಸಿಕೊಂಡು ಅಭ್ಯಾಸ ಮಾಡಿದರೆ ವಿದ್ಯಾರ್ಥಿ ಜೀವನ ಬಂಗಾರವಾಗುತ್ತದೆ. ಸಮಯ ವ್ಯರ್ಥ ಮಾಡಿದರೆ ಬದುಕು ಬರಡು ಆಗುತ್ತದೆ ಹಾಗಾಗಿ ಮಕ್ಕಳು ಮನುಕುಲದ ದಿಕ್ಸೂಚಿ ಎಂದು ಹೇಳಿದರು.ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು, ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, ಹಾಲಪ್ಪ ಮುರುಗಣ್ಣವರ ಹಾಗೂ ನಿಖೇತನ ಹುಲ್ಲೆನ್ನವರ ಸುಂದವಾಗಿ ಗಾನ ಸುಧೆಯನ್ನು ಹರಸಿ ಎಲ್ಲರನ್ನು ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸಿದ್ದು ದಳವಾಯಿಯವರು ವಹಿಸಿದ್ದರು. ವೇದಿಕೆಮೇಲೆ ಹಾಲಪ್ಪ ಸವದತ್ತಿ, ತೌಫಿಕ ಖತಿಬ್, ಅಶೋಕ ಕೋಣೆ, ಪ್ರಿಯಾ ಸವದತ್ತಿ, ವಿದ್ಯಾಶ್ರೀ ದಳವಾಯಿ, ಕಮಲವ್ವ ಲೋಗಾವಿ. ಎಸ್. ಆರ್. ಅನಗಲ್ಲಿ, ಎಂ. ಬಿ. ಮದಬಾವಿ, ಕೆ ಆರ್ ಹಾದಿಮನಿ ಪ್ರಧಾನ ಗುರು ಮಾತೆಯಾದ ಎಸ್. ಎಸ್. ಗುಬಚೆಯವರು, ಬಿ. ಎಚ್ ಹುಲ್ಲೆನ್ನವರ ಉಪಸ್ಥಿತರಿದ್ದರು.
ಶಿಕ್ಷಕ ಆನಂದ ವಾಜಂತ್ರಿ ನಿರೂಪಿಸಿದರು. ಎಸ್ ಎಸ್ ಮಿರ್ಜಿ ಸ್ವಾಗತಿಸಿದರು, ಶಿಕ್ಷಕಿ ಜಿ. ವೈ. ಮೇಳೆದ ವಂದಿಸಿದರು, ಶ್ರೀ ಎಂ, ಬಿ, ಮದಬಾವಿಯವರು ಕಾರ್ಯಕ್ರಮ ಸಂಯೋಜಿಸಿದ್ದರು.
ವರದಿ : ಸುನೀಲ್ ಕಬ್ಬೂರ