ಬೆಳಗಾವಿ.ರಾಯಬಾಗ: ತಾಲ್ಲೂಕಿನ ಭಿರಡಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಯಬಾಗ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿಗೆ ಇತ್ತೀಚೆಗೆ ನೇಮಕಗೊಂಡ ಪದಾಧಿಕಾರಿಗಳ ಪೂರ್ವ ಸಭೆ ಶನಿವಾರ ದಿನಾಂಕ 8 ರಂದು ಸಂಜೆ 4 ಘಂಟೆಗೆ ಜರುಗಿತು.
ಸಭೆಯಲ್ಲಿ ಪದಾಧಿಕಾರಿಗಳ ಪದಗ್ರಹಣದ ದಿನಾಂಕ, ಕಾರ್ಯಕ್ರಮ ನಡೆಯುವ ಸ್ಥಳ, ಮುಂದೆ ಈ ಮಕ್ಕಳ ಸಾಹಿತ್ಯ ಪರಿಷತ್ತಿನಿಂದ ನಡೆಯಬೇಕಾದ ರಚನಾತ್ಮಕ ಕಾರ್ಯಕ್ರಮಗಳ ರೂಪರೇಷೆಗಳ ಬಗ್ಗೆ ಸುದೀರ್ಘ ಚರ್ಚಿಸಲಾಯಿತು.ಪರಿಷತ್ತಿನ ಗೌರವ ಅಧ್ಯಕ್ಷ ಡಾ.ಜಯವೀರ ಎ.ಕೆ.ಅಧ್ಯಕ್ಷ ಶ್ರೀ ಅಮರ ಎನ್. ಕಾಂಬಳೆ,ಉಪಾಧ್ಯಕ್ಷ ಡಾ.ವಿಲಾಸ ಕಾಂಬಳೆ, ಪ್ರಧಾನ ಕಾರ್ಯದರ್ಶಿ,ಕವಿ ಶ್ರೀ ಶ್ರೀಶೈಲ ಹೊಸೂರ ಖಜಾಂಚಿ ಪ್ರೊ.ವಸಂತ ಬೆಕ್ಕೇರಿ, ಸಹ ಕಾರ್ಯದರ್ಶಿ, ಕವಿ.ಶ್ರೀ ಎಂ.ಕೆ.ಶೇಖ್, ನಿರ್ದೇಶರಾದ ಶಿಕ್ಷಕ ಶ್ರೀ ರಾಜೇಂದ್ರ ಕಾಂಬಳೆ,ರಮೇಶ ಕೋಳಿಗುಡ್ಡೆ, ಹಾಗೂ ಡಾ.ಅಪ್ಪಾಸಾಬ ಸುತಾರ ಸಭೆಯಲ್ಲಿ ಉಪಸ್ಥಿತರಿದ್ದು ಆಪ್ತ ಸಮಾಲೋಚನೆಯೊಂದಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*





