ಆಯ್ಕೆಯಾದ ಮೊದಲ ವೇತನ ಸರಕಾರಿ ಶಾಲೆಗೆ:- ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ

Share the Post Now

ಬೆಳಗಾವಿ.ರಾಯಬಾಗ:*: ಶಾಲೆಗಳ ಔನ್ಯತ್ಯೆಯೇ ಎಲ್ಲ ಸಮ್ಮಸ್ಯೆಗೆ ಪರಿಹಾರ, ಅದರಲ್ಲೂ ಆರೋಗ್ಯ ಮತ್ತು ಉದ್ಯೋಗ ಸಮಾಜ ಪರಿವರ್ತನೆಯ ಮೂಲ ಮಂತ್ರಗಳು ಎಂದು ಸರಕಾರಿ ಪ್ರೌಢಶಾಲೆ ಬಸ್ತವಾಡದಲ್ಲಿ ನಡೆದ 77 ನೇ ಸ್ವಾತಂತ್ರ್ಯ ಸಂಭ್ರಮದ ಧ್ವಜಾರೋಹಣ ನೆರವೇರಿಸಿ ಕುಡಚಿ ಶಾಸಕರಾದ ಸನ್ಮಾನ್ಯ ಶ್ರೀ ಮಹೇಂದ್ರ ತಮ್ಮಣ್ಣವರ ನುಡಿದರು.

ತಮ್ಮ ಮೊದಲ ವೇತನವನ್ನು ಸರಕಾರಿ ಪ್ರೌಢಶಾಲೆ ಬಸ್ತವಾಡ ಶಾಲೆಗೆ ನೀಡಿ ಶಾಲೆಯನ್ನು ದತ್ತು ತಗೆದುಕೊಂಡು, ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಇಡೀ ರಾಜ್ಯಕ್ಕೆ ಮಾದರಿಯಾದರು.

ಇದು ಮೊದಲ ಶಾಲೆ, ಇದರೊಂದಿಗೆ ಇನ್ನೂ ನಾಲ್ಕು ಶಾಲೆಗಳನ್ನು ಅವುಗಳ ಸೌಲಭ್ಯಗಳ ಅಳತೆಗೋಲಿನ ಮೇಲೆ‌ ಆಯ್ಕೆ ಮಾಡಿಕೊಂಡು ಅವುಗಳನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯರು ಶಾಸಕರಿಗೆ ಹಗುರ ಸತ್ಕರಿಸಿ ಮನವಿ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಪಂಚಾಯತಿ ಸದಸ್ಯರಾದ ಶ್ರೀಕಾಂತ ವಡಗಾಂವೆ, ಸುನೀಲ ಕಾಂಬಳೆ. ಸಾವಿತ್ರಿ ಲಠ್ಠೆ,
ಅಮೃತವ್ವ ಹೋಳಕರ, ಜ್ಯೋತಿಗೌಡ ಪಾಟೀಲ, ರಾಮಕೃಷ್ಣ ಲಠ್ಠೆ, ಯಮನಪ್ಪ ಎರಡೆತ್ತಿನವರ ಭೂಪಾಲ ಕಾಂಬಳೆ,ಲಕ್ಕಪ್ಪ ಮಂಗಸೂಳಿ, ಬಸು ರಾಯಮನೆ,ರಾಜು ಲಠ್ಠೆ ,ಮಾರುತಿ ಲಠ್ಠೆ, ಪ್ರಕಾಶ್ ಲಠ್ಠೆ, ಪ್ರದೀಪ ಹಾಲ್ಗುಣಿ, ಮಂಗಲಾ ಕಾಂಬಳೆ , ಮೋಹನ ಕಾಂಬಳೆ ಮುಂತಾದವರು ಭಾಗವಹಿಸಿದ್ದರು.

ಎಸ್ ಎಸ್ ಸಂಕ್ರಟ್ಟಿ ನಿರೂಪಿಸಿದರು, ತಿಮ್ಮಪ್ಪ ಆರ್ ಸ್ವಾಗತಿಸಿದರು, ಮತ್ತು ಜಿ ಎಸ್ ಪಾಟೀಲರು ವಂದಿಸಿದರು.

ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!