ಬೆಳಗಾವಿ
ವರದಿ: ಶಶಿಕಾಂತ ಪುಂಡಿಪಲ್ಲೆ
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಬೇಡರಹಟ್ಟಿ ಗ್ರಾಮದ ನಿವಾಸಿಯಾದ “ಪೈಗಂಬರ್ ಜಂಗಲಸಾಬ್ ನಧಾಫ(೨೯)” ಅವರು ಕಳೆದ
9 ತಿಂಗಳಿನಿಂದ ರಾಜಾಸ್ಥಾನ ರಾಜ್ಯದ ಬೆರೂರನಲ್ಲಿ 12 ನೇ ಬೆಟಾಲಿಯನ್ ನಲ್ಲಿ ತಾಯಿ ಭಾರತಾಂಬೆಗೆ ಸೇವೆ ಸಲ್ಲಿಸುತ್ತಿದ್ದನು.
ಆತನಿಗೆ ಆರೋಗ್ಯದಲ್ಲಿ ಕೆಲ ದಿನಗಳ ಹಿಂದೆ ಕಾಮಾಲೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಜೆ ಪಡೆದು ಚಿಕಿತ್ಸೆಯನ್ನ ಹೈದರಾಬಾದ್,ದೆಹಲಿ, , ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು ಆದರೂ ಸಹ ಗುಣಮುಖರಾಗದ ಕಾರಣ ಅಥಣಿಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸುವಾಗ ಮಾರ್ಗದ ಮಧ್ಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ.
ಇಂದು ಬೇಡರಹಟ್ಟಿಯಿಂದ ಚಮಕೇರಿ ಗ್ರಾಮದ ವರೆಗೆ ಮೆರವಣಿಗೆ ಮಾಡುವ ಮೂಲಕ ಇಂದು ಚಮಕೇರಿ ಗ್ರಾಮದಲ್ಲಿ ಅಂತ್ಯಕ್ರಿಯೆಯನ್ನು ಸರ್ಕಾರಿ ಸಕಲ ಗೌರವಗಳೊಂದಿಗೆ ನೆರವೇರಿಸಲಾಯಿತು
ಇನ್ನು ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು,
ಐಗಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಈ ಸಂದರ್ಭದಲ್ಲಿ ಸಿಎಸ್ಐಪ್ ನ ಅಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿ ಯೋಧನಿಗೆ
ಗೌರವವನ್ನು ಸಲ್ಲಿಸಿದರು