ಬೆಳಗಾವಿ. ಅಥಣಿ
ಶಶಿಕಾಂತ ಪುಂಡಿಪಲ್ಲೆ 🖊️
ಅಥಣಿ: ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಾರ್ಚ್ 28ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಅದನ್ನು ಉದ್ಘಾಟನೆ ಮಾಡಿಸಲಾಗುವುದು ಎಂದು ಶಾಸಕ ಮಹೇಶ್ ಕುಮಠಳ್ಳಿ ಹೇಳಿದ್ದಾರೆ.
ಕಕಮರಿ ಗ್ರಾಮದಲ್ಲಿ 3 ಕೋಟಿ ರೂಪಾಯಿ ವೆಚ್ಚದ ರಾಜ್ಯದ ಗಡಿಯಿಂದ ಉಮಾರಾಣಿ ಕಕಮರಿ ರಸ್ತೆ ಕಾಮಗಾರಿ ಭೂಮಿ ಪೂಜೆ
1 ಕೋಟಿ 88 ಲಕ್ಷ ರೂಪಾಯಿ ವೆಚ್ಚದ ಕಕಮರಿಯಿಂದ ರಾಮತೀರ್ಥ ಮಹಾರಾಜರ ತೋಟದವರೆಗಿನ, ರಸ್ತೆ ಕಾಮಗಾರಿ ಭೂಮಿ ಪೂಜೆ
2 ಕೋಟಿ ರೂ ವೆಚ್ಚದ ಐಗಳಿ ಕ್ರಾಸ್ ದಿಂದ ಎಲ್ಲಮ್ಮವಾಡಿ ರಸ್ತೆ ಕಾಮಗಾರಿ ಭೂಮಿ ಪೂಜೆ
ಕೋಕಟನೂರ ಗ್ರಾಮದಲ್ಲಿ ಪದವಿಪೂರ್ವ ಕಾಲೇಜಿನ 1 ಕೊಠಡಿ ಕಾಮಗಾರಿ ಭೂಮಿ ಪೂಜೆ
1 ಕೋಟಿ 60 ಲಕ್ಷ ರೂ ವೆಚ್ಚದ ಕೊಕಟನೂರದಿಂದ ಶಿರಹಟ್ಟಿ ರಸ್ತೆ ಕಾಮಗಾರಿ ಭೂಮಿ ಪೂಜೆ
ಸವದಿ ಗ್ರಾಮದಲ್ಲಿ 5 ಕೋಟಿ ರೂ ವೆಚ್ಚದ ಸವದಿಯಿಂದ ನಂದಗಾಂವ ಕಾಮಗಾರಿ ಭೂಮಿ ನೆರವೇರಿಸಿ ಅವರು ಮಾತನಾಡಿದರು.
ಅಮ್ಮಾಜೇಶ್ವರಿ ಏತ ನೀರಾವರಿ ಮಂಜೂರಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ಅಥಣಿ ಮತಕ್ಷೇತ್ರದಲ್ಲಿ ಮಾರ್ಚ 24 ರಂದು 13 ಕೋಟಿ 48 ಲಕ್ಷ ರೂ ಅನುದಾನದಲ್ಲಿ ಜನಪರ ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನ ಗೊಳಿಸಿರುವೆ. ಜೈನ್ ಸಮುದಾಯದ ಭವನಗಳಿಗಾಗಿ 2 ಕೋಟಿ 10 ಲಕ್ಷ ಅನುದಾನ ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿಯೇ ಈ ಭವನಗಳಿಗೂ ಭೂಮಿ ಪೂಜೆ ನೆರವೇರಿಸುವೆ ಎಂದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಶಿವಾನಂದ ಸಿಂಧೂರ, ಗುರು ಪಾಟೀಲ, ಶ್ರೀಧರ ಹಂಡಿ, ಅಪ್ಪಾಸಾಬ ಅವತಾಡೆ, ರಮೇಶ ಧುಮಾಳೆ, ಧುರೀಣರಾದ ವೆಂಕಣ್ಣಗೌಡ ಪಾಟೀಲ, ಗುರಪ್ಪ ದಾಶಾಳ, ಶ್ರೀಶೈಲ ಜನಗೌಡ, ಗಿರಿಶ ಬಸರಗಿ, ಗಿರೀಶ ಸಜ್ಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.