ಹಳ್ಳೂರ .
ಸಂಘ ಸಂಸ್ಥೆಗಳು ರೈತ ಬಾಂಧವರಿಗೆ ಅನುಕೂಲವಾಗಿ ಬಾಳಿಗೆ ಬೆಳಕಾಗಿ ನಿಲ್ಲಬೇಕು. ಬ್ಯಾಂಕಿನಿಂದ ಹೆಚ್ಚಿನ ರೀತಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಿ ಈ ಸಂಸ್ಥೆಯು ಎತ್ತರ ಮಟ್ಟಕ್ಕೆ ಬೆಳೆಯಲೀ ಸಿಬ್ಬಂದಿಗಳು ರೈತ ಬಾಂಧವರ ಜೊತೆ ಒಳ್ಳೆಯ ಸಂಬಂಧವಿಟ್ಟಕ್ಕೊಂಡು ಸಹಕಾರ ನೀಡಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ ರೈತರು ಕೂಡಾ ತಗೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರು ಪಾವತಿಸಬೇಕೆಂದು ಹೇಳಿದರು.
ಗುರುಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 1960 ರಲ್ಲಿ ಪ್ರಾರಂಭವಾಗಿ ರೈತರ ಜೊತೆ ಒಳ್ಳೆಯ ಒಡನಾಟವಿಟ್ಟುಕ್ಕೊಂಡು ಪ್ರಾಮಾಣಿಕವಾಗಿ ಕೆಲಸ ಕಾರ್ಯ ಮಾಡಿ ಸಂಘವು ಪ್ರಗತಿ ಪಥದತ್ತ ಸಾಗುತ್ತಿದೆ. ಡಿ ಸಿ ಸಿ ಬ್ಯಾಂಕವು ಅಂಗ ಸಂಸ್ಥೆಯಾಗಿ ಬೆಳೆದಿದೆ. ರೈತರ ಜೀರ್ಣೋದ್ದಾರಕ್ಕೆ ಶ್ರಮಿಸುತ್ತಿದೆ. ರೈತರ ಅನುಕೂಲಕ್ಕಾಗಿ ಡಿ ಸಿ ಸಿ ಬ್ಯಾಂಕಿನ ಉಪ ಶಾಖೆಯನ್ನು ಹಳ್ಳೂರ ಗ್ರಾಮದಲ್ಲಿ ಸ್ಥಾಪನೆ ಮಾಡಿದ್ದಾರೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷರಾದ ಸುರೇಶ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯ ನಿರ್ವಾಕರಾದ ರಾಮಪ್ಪ ಗೌರವ್ವಗೋಳ ವರದಿ ವಾಚನ ಮಾಡಿದರು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಗರಡಿ ಮನೆ ಉದ್ಘಾಟನೆ, ಜಲ ಜೀವಣ ಮಸಿನ ಉದ್ಘಾಟನೆ. 110/ 11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದ ಉದ್ಘಾಟನೆ. ಪಿರಸಾಭ ದರ್ಗಾ ವೀಕ್ಷಣೆ ಮಾಡಿ ನೂತನ ಮದಿನಾ ಯುವತಿ ಸಂಘ ಉದ್ಘಾಟನೆಯ ನ್ನು ನೆರವೇರಿಸಿದರು. ತೋಟಗೇರ ದೈವ, ಹರಳಯ್ಯ ದೇವಸ್ಥಾನ ಹಾಗೂ ಅನೇಕ ಕಡೆ ಸನ್ಮಾನ ಮಾಡಿ ಸತ್ಕರಿಸಿದರು.ಕಾರ್ಯಕ್ರಮದಲ್ಲಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.