ಬೆಳಗಾವಿ. ರಾಯಬಾಗ
ಕುಡಚಿ ಮತಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಮಹಿಳಾ ಸಮಾವೇಶ
ಬೆಳಗಾವಿ :ಕುಡಚಿ ಕ್ಷೇತ್ರದ ಸಮಸ್ಯೆಗಳಿಗೆ ಧ್ವನಿಯಾಗಿ ಪಿ. ರಾಜೀವ ವಿಧಾನ ಸಭೆಯಲ್ಲಿ ಘರ್ಜಿಸಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಹಾರೂಗೇರಿಯ ಎಚ್ ವಿ ಎಚ್ ವಿದ್ಯಾಲಯದ ಆವರಣದಲ್ಲಿ ಭಾರತೀಯ ಜನತಾ ಪಕ್ಷ ಕುಡಚಿ ಮಂಡಲ ಜಿಲ್ಲಾ ಮಹಿಳಾ ಸಮಾವೇಶ ಹಾಗೂ ಸಾಂಸ್ಕೃತಿಕ ಉತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರದ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಜನರು ನೆಮ್ಮದಿಯಿಂದ ಬದುಕುವoತಾಗಿದೆ ಆದ್ದರಿಂದ ಎಲ್ಲ ಕಾರ್ಯಕರ್ತರು ತಮ್ಮ ತಮ್ಮ ಭೂತ ಗೆಲ್ಲಿಸಿ ನಾನು ದೇಶ ಗೆಲ್ಲಿಸುತ್ತೇನೆ ಎಂದು ಹೇಳಿದ ದೇಶದ ಪ್ರಧಾನಿ ನರೇಂದ್ರ ಮೋದಿ ಕನಸು ನನಸು ಮಾಡಬೇಕೆಂದು ಹೇಳಿದರು.
ಹೆಣ್ಣು ಮನಸ್ಸು ಮಾಡಿದರೆ ಸಮಾಜ, ರಾಜ್ಯ ಹಾಗೂ ದೇಶವನ್ನು ಬದಲಿಸುತ್ತಾಳೆ ಆದ್ದರಿಂದ ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರು ಮಹಿಳೆಯರು ಯಾವುದೇ ತೊಂದರೆ ಅನುಭವಿಸಬಾರದು ಎಂದು ಉಜ್ವಲಾ, ಜಲ ಜೀವನ ಮಿಷನ್ ಇಂತಹ ಅನೇಕ ಯೋಜನೆಗಳ ಮಹಿಳೆಯರ ಪರವಾಗಿದ್ದಾರೆ ಎಂದು ಕುಡಚಿ ಶಾಸಕ ಪಿ. ರಾಜೀವ ಹೇಳಿದರು.
ಇದೇ ಸಮಯದಲ್ಲಿ ಪೌರ ಕಾರ್ಮಿಕ ಮಹಿಳೆಗೆ ಪಿ. ರಾಜೀವ ದಂಪತಿಗಳು ಪಾದ ಪೂಜೆ ಸಲ್ಲಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಹಾಗೂ ಶತಾಯುಷಿ ಮಹಿಳೆಯರನ್ನು ಪಿ. ರಾಜೀವ ದಂಪತಿಗಳಿಗೆ ಸನ್ಮಾನಿಸಿದರು.
ಇನ್ನು ಮಹಿಳೆಯರಿಂದ ಸಾಂಸ್ಕೃತಿಕ ಉತ್ಸವ ಜರುಗಿ ನೆರೆದ ಎಲ್ಲ ಸಾರ್ವಜನಿಕರನ್ನು ರಂಜಿಸಿದರು.
ಇದೇ ಸಂದರ್ಭದಲ್ಲಿ ಶಾಂಭವಿ ಅಶ್ವತಪೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ ನೆರ್ಲಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡರ, ಸತೀಶ ಅಪ್ಪಾಜಿಗೋಳ, ರಮೇಶ ಖೇತಗೌಡರ, ಡಿ. ಸಿ. ಸದಲಗಿ, ಬಸನಗೌಡ ಆಸಂಗಿ, ಶಿವಗೊಂಡ ಧರ್ಮಟ್ಟಿ ಉಪಸ್ಥಿತರಿದ್ದರು.ಲತಾ ಹುದ್ದಾರ ಅನ್ನಪೂರ್ಣ ಯರಡೇತ್ತಿ ಶಿಲ್ಪಾ ತೊದಲಬಾಗಿ, ಮಂಗಲಾ ಪನದಿ ನಿರೂಪಿಸಿ, ಗೀತಾ ಮುರ್ತಾಳೆ ವಂದಿಸಿದರು.