ಸಿರವಾರ.
ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಅದಿಕಾರಕ್ಕೆ ಬರಲು ಮುಸ್ಲಿಂರ ಶ್ರಮವು ಒಂದು ಕಾರಣವಾಗಿದೆ, ಸರ್ಕಾರದಿಂದ ವಕ್ಪ್ ಮಂಡಳಿಯಿಂದ ಸುಲಭವಾಗಿ ಸಾಲಸೌಲಭ್ಯ, ಶೈಕ್ಷಣಿಕ ಪ್ರಗತಿಗೆ ಅನುದಾನ, ವಸತಿ ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ಸಿರವಾರ ಅಂಜುಮಾನ್ ಕಮಿಟಿಯಿಂದ ರಾಜ್ಯ ವಕ್ಪ್ ಬೋರ್ಡ್ ಅದ್ಯಕ್ಷ ಅನ್ವರ ಪಾಶ ಅವರಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದ್ದಾರೆ. ರಾಯಚೂರು ನಗರಕ್ಕೆ ಭಾನುವಾರ ಆಗಮಿಸಿದ ಅವರಿಗೆ ಅಂಜುಮಾನ ಕಮಿಟಿಯಿಂದ ನೀಡಿದ ಮನವಿ ಪತ್ರದಲ್ಲಿ ಗ್ರಾಮೀಣ- ನಗರ ಪ್ರದೇಶದಲ್ಲಿ ಮುಸ್ಲಿಂ ಸಮಾಜದವರು ಅನೇಕರು ಬಡತನರೇಖೆಗಿಂತಲೂ ಕಡಿಮೆ ಇದ್ದಾರೆ, ಅಮತವರಿಗೆ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ, ಖಬರ್ ಸ್ಥಾನಗಳಿಗೆ ತಡೆಗೋಡೆ, ಮೂಲಭೂತ ಸೌಲಭ್ಯಗಳು ಇಲ್ಲ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸಿ ಬಡವರಿಗೆ ಸುಲಭವಾಗಿ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ, ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಬಷೀರ್ ಸಾಬ್, ಅಂಜುಮಾನ ಕಮಿಟಿ ಅದ್ಯಕ್ಷ ಮಹ್ಮದ ವಲಿ ಗುತ್ತೆದಾರ, ಸತ್ತರಸಾಬ್ ಗುತ್ತೆದಾರ, ಇಬ್ರಾಹಿಂ, ಎಂ.ಡಿ.ಇಸ್ಮಾಯಿಲ್ ಸೇರಿದಂತೆ ಇನ್ನಿತರರು ಇದರು.





