ಅಗಲಿದ ಸಿದ್ದೇಶ್ವರ ಶ್ರೀಗಳಿಗೆ ಸಂತಾಪ ಸೂಚಿಸಿದ ಡಾ. ಸಿ. ಬಿ. ಕುಲಿಗೋಡ

Share the Post Now

.
ವರದಿ: ಸಂಗಮೇಶ ಹಿರೇಮಠ

ಮುಗಳಖೋಡ: ನಮ್ಮ ದೇಶ ಕಂಡ ಅತ್ಯಂತ ಶ್ರೇಷ್ಠ ಸಂತರಲ್ಲಿ ಒಬ್ಬರಾದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿದ್ದು ನಮಗೆಲ್ಲರಿಗೂ ಅತ್ಯಂತ ದುಃಖದ ವಿಷಯವಾಗಿದೆ ಎಂದು ಜಿ.ಪಂ.ಮಾಜಿ.ಸದಸ್ಯ ಡಾ. ಸಿ.ಬಿ.ಕುಲಿಗೋಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀಗಳು ಹೇಳುತ್ತಿದ್ದ ವಿಚಾರವನ್ನು ತಮ್ಮ ಆಚಾರದ ಮುಖಾಂತರ ನಡೆದು ತೋರಿಸಿದರವರು. ಮತ್ತು ಅತ್ಯಂತ ಸರಳವಾದ ಮಾರ್ಗಗಳಿಂದ ಜನ ಸಾಮಾನ್ಯರು ಅಧ್ಯಾತ್ಮಿಕ ಜೀವನ ನಡೆಸಲು ಪ್ರೇರಣೆ ನೀಡಿದ್ದರು. ಶ್ರೀಗಳು ನಮ್ಮ ಮುಗಳಖೋಡದ ಚವಿವ ಸಂಘದ ಆವರಣಕ್ಕೆ ಎರಡು ಬಾರಿ ಆಗಮಿಸಿ ಕಳೆದ ವರ್ಷ ನೂತನವಾಗಿ ನಿರ್ಮಾಣಗೊಂಡ ಸಾಯಿ ಮಂದಿರ ಕಳಸಾರೋಹಣ ಕಾರ್ಯಕ್ರಮದಲ್ಲಿ ಬಾಗಿಯಾಗಿ ಅತ್ಯಂತ ಉಲ್ಲಾಸದಿಂದ ಉತ್ಸಾಹದ ಮಾತುಗಳನ್ನಾಡಿ ಆಶೀರ್ವಚನದ ಮೂಲಕ ಆಶೀರ್ವಾದ ಮಾಡಿದ್ದಾರೆ.

ಪೂಜ್ಯರನ್ನು ಕಳೆದುಕೊಂಡ ನಮ್ನ ನಾಡು ಇಂದು ಆಧ್ಯಾತ್ಮಿಕವಾಗಿ ಬಡವಾಗಿದೆ. ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ.

ಶ್ರೀಗಳ ಆಶೀರ್ವಾದ ದೇಶ ಬಾಂಧವರಿಗೆಲ್ಲಾ ಸದಾ ಇರಲಿ ಎಂದು ಚವಿವ ಸಂಘ ಹಾಗೂ ಮುಗಳಖೋಡ ಪಟ್ಟಣದ ಜನರ ಪರವಾಗಿ ನಮನಗಳನ್ನು ಸಲ್ಲಿಸುತ್ತಿದ್ದೇನೆಂದು ಡಾ. ಸಿ.ಬಿ.ಕುಲಿಗೋಡ ಸಂತಾಪ ಸೂಚಿಸಿದರು.

Leave a Comment

Your email address will not be published. Required fields are marked *

error: Content is protected !!