ಕಬ್ಬೂರ :ಸಮೀಪದ ಬೆಲ್ಲದ-ಬಾಗೇವಾಡಿ ಗ್ರಾಮದ ನಿಂಗನಕೋಡಿ ತೋಟದಲ್ಲಿ ಇತ್ತೀಚಿಗೆ ಸಮಾಜ ಸೇವೆ ಮಾಡುತ್ತಿರುವ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರಿಗೆ ಸಮಾಜ ಸೇವೆಯನ್ನು ಮೆಚ್ಚಿ ರಾಜ್ಯೋತ್ಸವ ಪ್ರಶಸ್ತಿ ನಿಡಿದ್ದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಎಂದು ಮಾಳಿ ಸಮಾಜದ ಅದ್ಯಕ್ಷ ಗ್ರಾಪಂ ಸದಸ್ಯರಾದ ಬಸವರಾಜ ಬಂಬಲವಾಡೆ ಸನ್ಮಾನಿಸಿ ಮಾತನಾಡಿದರು.
ಮಾಳಿ-ಮಾಲಗಾರ ಸಮಾಜದವತಿಯಿಂದ ಸನ್ಮಾನ ಸ್ವಿಕರಿಸಿದ ಮುರಿಗೆಪ್ಪ ಮಾಲಗಾರ ಮಾತನಾಡಿದ ಅವರು, ನಾವು ಸಮಾಜಕ್ಕಾಗಿ ಯಾವುದೇ ಪ್ರಚಾರವನ್ನೂ ಬಯಸದೇ ಸೇವೆ ಮಾಡುವುದೇ ನಿಜವಾದ ಜನಸೇವೆಯಾಗಿದೆ ಎಂದರು.
ಮಾಳಿ ಸಮಾಜದ ಉಪಾದ್ಯಕ್ಷ ಬೀಮಶಿ ಗೋಲಬಾವಿ ಮಾತನಾಡಿ. ಈ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನಮ್ಮ ಸಮಾಜದ ಮುರಿಗೆಪ್ಪ ಮಾಲಗಾರ ಅವರಿಗೆ ದೊರೆತಿದ್ದು ನಮಗೆ ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಎಲ್ಲರೊಡನೆ ಬೆರೆತು ಅಹಂಬಾವ ವಿಲ್ಲದೆ ಇನ್ನೊಬ್ಬರು ಕಷ್ಟಕ್ಕೆ ಸಹಾಯ ಸಹಕಾರ ನೀಡುವ ಮನೋಭಾವನೆ ಬೆಳೆಸಿಕೊಂಡು ಬಂದಿದ್ದಾರೆ ಎಂದರು.
ಈ ಸಂದರ್ಬದಲ್ಲಿ, ಸುಬಾಷ ಅಳಗುಂಡಿ,ಪ್ರಕಾಶ ದೋಣವಾಡೆ,ಮಲ್ಲಿಕಾರ್ಜುನ ಬಂಬಲವಾಡೆ,ಬಸವರಾಜ ತಳವಾರ,ಮಹಾದೇವ ಬಂಬಲವಾಡೆ,ಸುಕುಮಾರ ಉಳ್ಳಗಡ್ಡಿ,ಬೀಮಶಿ ಅಳಗುಂಡಿ ಉಪಸ್ಥಿತರಿದ್ದರು.