ಬೆಳಗಾವಿ. ರಾಯಬಾಗ
ಬೆಳಗಾವಿ :ರಾಯಬಾಗ ವಿಧಾನಸಭಾ ಮತಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.ರಾಯಬಾಗ ಮತಕ್ಷೇತ್ರದಿಂದ ನಿನ್ನೆಯ ದಿನ ಬಿಜೆಪಿ ಅಭ್ಯರ್ಥಿ ದುರ್ಯೋದನ ಐಹೊಳೆಯವರು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಇವತ್ತು ಕಾಂಗ್ರೆಸ್ ಅಭ್ಯರ್ಥಿ ಮಹಾವೀರ ಮೋಹಿತೆ ನಾಮಪತ್ರ ಸಲ್ಲಿಕೆ ಮಾಡಿದರು .ಇದಕ್ಕೂ ಮುನ್ನ ತಮ್ಮ ಸ್ವನಿವಾಸದಿಂದ ರೋಡಶೋ ಮೂಲಕ ಸಾಗರೋಪಾದಿಯಲ್ಲಿ ಆಗಮಿಸಿದ ತಮ್ಮ ಕಾರ್ಯಕರ್ತರ ಪಡೆಯೊಂದಿಗೆ ಆಗಮಿಸಿ ತಹಶಿಲ್ದಾರ ಕಛೇರಿಯಲ್ಲಿ ಚುನಾವಣಾಧಿಕಾರಿ ರೇಖಾ ಡೋಳ್ಳೆನ್ನವರ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇವತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಪಕ್ಷದ ಹಿರಿಯರು ಕಾರ್ಯಕರ್ತ ಅವರೆಲ್ಲ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸಹಕರಿಸುತ್ತಿದ್ದಾರೆ ಮೊದಲನೆಯದಾಗಿ ಈ ಕ್ಷೇತ್ರ ಬರಪೀಡಿತವಾಗಿದ್ದು ಪ್ರತಿ ಹಳ್ಳಿಗೂ ನೀರಾವರಿ ವ್ಯವಸ್ಥೆ ಯನ್ನು ಮಾಡಲಾಗುದು ಮತ್ತು ಮತಕ್ಷೇತ್ರದಲ್ಲಿ ಉನ್ನತ ಶಾಲೆಗಳನ್ನು ನಿರ್ಮಾಣ ಮಾಡುವುದು ಹಾಗೂ ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೈಟೆಕ್ ಆಸ್ಪತ್ರೆ ತೆರೆಯುವುದು ನಿರುದ್ಯೋಗ ಯುವಕರಿಗೆ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗವನ್ನುವದಗಿಸುವದು ಇನ್ನು ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುವಾದಾಗಿ ಹೇಳಿದರು
ಇನ್ನು ಸಾಮಾನ್ಯ ಕಾರ್ಯಕರ್ತರಾಗಿದ್ದ ನನ್ನನು ಪಕ್ಷದ ವರಿಷ್ಟರು ರಾಯಬಾಗ ಮತಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದಕ್ಕಾಗಿ ಎಲ್ಲರಿಗೂ ಧನ್ಯವಾದಗ ತಿಳಿಸಿದರು
ಈ ಸಂದರ್ಭದಲ್ಲಿಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೇ ಉದ್ಯಮಿ ಸದಾಶಿವ ದೇಶಿಂಗೆ ಅಪ್ಪಸಾಬ್ ಕುಲಗೋಡೆ ರಾಜು ಕೋಟಗಿ ಅರ್ಜುನ್ ನಾಯಿಕವಾಡಿ ಅಬ್ಬಾಸ್ ಮುಲ್ಲಾ ದಿಲೀಪ್ ಪಾಯನ್ನವರ ಶಂಕರಗೌಡ ಪಾಟೀಲ್ ಸಿದ್ದಾರೋಡ ಬಂಡಗಾರ ದಿಲೀಪ್ ಜಮಾದಾರ ಸತ್ತಾರ ಮುಲ್ಲಾ ಸೇರಿದಂತೆ ಅನೇಕರು ಇದ್ದರು.