ಅಥಣಿ : ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಅತ್ಯವಶ್ಯಕವಾಗಿದೆ, ಏಕೆಂದರೆ ಬಿಜೆಪಿ ಸರಕಾರ ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಮಾಡಿ ಜನಸಾಮಾನ್ಯರಿಗೆ ದುಬಾರಿಯಾದಂತಹ ಮೂಲಭೂತ ಅವಶ್ಯಕತೆಗಳನ್ನ ಮಾಡಿಟ್ಟು ಜನರ ಪ್ರಾಣ ಹಿಂಡುವ ಕೆಲಸ ಮಾಡಿದೆ ಹಾಗಾಗಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚಿನ ಮತಗಳನ್ನು ಹಾಕಬೇಕು ಎಂದು ಅಥಣಿ ಬ್ಲಾಕ್ ಯುವ ಘಟಕದ ಅಧ್ಯಕ್ಷ ರವಿ ಬಡಕಂಬಿ ಅವರು ಹೇಳಿದರು.
ಅವರು ಅಥಣಿ ಪಟ್ಟಣದ ವಾರ್ಡ್ ನಂಬರ್ 27 ರಲ್ಲಿ ಅಥಣಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಲಕ್ಷ್ಮಣ ಸವದಿ ಅವರ ಪರವಾಗಿ ಮತಯಾಚನೆಯನ್ನ ಮಾಡುತ್ತಾ ಈ ಹಿಂದೆ ಲಕ್ಷ್ಮಣ್ ಸವದಿ ಅವರು ಅಥಣಿ ಮತಕ್ಷೇತ್ರದ ಶಾಸಕರಾಗಿದ್ದ ವೇಳೆ ಹಲವಾರು ಜನಪರವಾದ ಮತ್ತು ಸಾಮಾನ್ಯ ಜನರಿಗೆ ಹತ್ತಿರವಾಗುವ ಜೊತೆಗೆ ರೈತರ ಸಲುವಾಗಿಯೂ ಕೂಡ ವಿಶೇಷ ಯೋಜನೆಗಳನ್ನು ಅತ್ಯಂತ ಹೆಚ್ಚಿನ ಕಾಳಜಿ ವಹಿಸಿ ಮಾಡಿರುತ್ತಾರೆ
ಅದಕ್ಕಾಗಿ ಅವರಿಗೆ ಬರೆದ ನಾಡಿನ ಭಗೀರಥ ಎಂದು ಕೂಡ ಕರೆಯುತ್ತಾರೆ. ಹಾಗೆ ಮುಂಬರುವ ಚುನಾವಣೆಯಲ್ಲಿ ಅವರಿಗೆ ನಾವೆಲ್ಲ ಸೇರಿ ಅತಿ ಹೆಚ್ಚಿನ ಮತಗಳನ್ನು ಕೊಟ್ಟು ಪ್ರಚಂಡ ಬಹುಮತದಿಂದ ಗೆಲ್ಲಿಸಿ ತಂದರೆ ಅಥಣಿ ಮತ ಕ್ಷೇತ್ರದ ಸರ್ವಾಂಗಿನ ಅಭಿವೃದ್ಧಿಗೆ ಮತ್ತೆ ವಿಶೇಷ ಯೋಜನೆಗಳನ್ನು ಜಾರಿಗೆಗೊಳಿಸುವ ಯೋಜನೆ ಅವರದಿದೆ ಹಾಗಾಗಿ ನಾವೆಲ್ಲ ತಪ್ಪದೇ ಮತದಾನವನ್ನ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸೋಣ ಎಂದು ವಿನಂತಿಸಿದರು.
ಈ ವೇಳೆ ರವಿ ಭಾಸಿಂಗಿ, ಸಚಿನ ಬಡಕಂಬಿ, ರಮೇಶ ಮಾಳಿ, ಲಕ್ಷ್ಮಣ ಬಡಕಂಬಿ, ಅನೀಲ ನರೋಡೆ, ಅರುಣ ಚಮಕೇರಿ, ಮುರುಗೇಶ ಮೋಳೆ, ರಾಮನಿಂಗ ಬಡಕಂಬಿ, ಮಾಂತೇಶ ಬಡಕಂಬಿ, ಬಶೀರ ಯಲ್ಲಾಪೂರ, ಬಶೀರ ಖಲೀಫಾ, ಇರ್ಫಾನ್ ಬಾಗವಾನ, ರಾಮು ಬಡಕಂಬಿ, ರಾಜು ಸಾರವಾಡೆ, ಅಭಿಷೇಕ ಗೌರಾಣಿ, ರಾಜು ಬಡಕಂಬಿ, ಮಾದೇವ ಬಡಕಂಬಿ, ಶಂಕರ ಬಡಕಂಬಿ, ಮಾಂತು ಭಾಸಿಂಗಿ, ಈಶ್ವರ ಕಬಾಡಗಿ, ಸದಾಶಿವ ಬಡಕಂಬಿ, ಸೇರಿದಂತೆ ಇತರರಿದ್ದರು.