ಕೋಲಾರ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡುತ್ತಿದೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಪೂರ್ಣ ಬಹುಮತಗಳೊಂದಿಗೆ ಅಧಿಕಾರಕ್ಕೆ ತರಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಕೋಲಾರದಲ್ಲಿ ನಡೆದ ಜೈ ಭಾರತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ 40% ಹಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೀಳಿಸಬಹುದು. ಕಳ್ಳ ಹಣದಲ್ಲಿ ಸರ್ಕಾರವನ್ನು ಕೆಡವುವ ಕೆಲಸ ಮಾಡಬಹುದು. ಬಿಜೆಪಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದರು.
ಮೋದಿಯವರೇ ವರದಿ ಬಿಡುಗಡೆ ಮಾಡಿ. ನೀವು ವರದಿ ಬಿಡುಗಡೆ ಮಾಡಲಿಲ್ಲ ಎಂದರೆ ಅದು ಒಬಿಸಿಗೆ ಮಾಡಿದ ಅಪಮಾನ. ನೀವು ಒಬಿಸಿ ಬಗ್ಗೆ ಮಾತನಾಡಿದಿರಿ. ಅವರ ಜನಸಂಖ್ಯೆ ಎಷ್ಟಿದೆ ಎಂದು ನಮಗೆ ಗೊತ್ತಿದೆ. ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಯ ಅನುಗುಣವಾಗಿ ಅವರಿಗೆ ಅವಕಾಶ ನೀಡಿ. ಮೊದಲು 50% ಮೀಸಲಾತಿ ಇರುವುದನ್ನು ತೆಗೆದು ಹಾಕಿ. ಆಗ ಓಬಿಸಿ ಬಗ್ಗೆ ಮಾತಾಡಬಹುದು. ಮೋದಿ ಅದಾನಿಗೆ ಸಹಾಯ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾರ್ಮಿಕರು ಹಾಗೂ ರೈತರಿಗೆ ಸಹಾಯ ಮಾಡುತ್ತೇವೆ. ಮೋದಿಯವರು ಬ್ಯಾಂಕ್ ಬಾಗಿಲನ್ನು ಉದ್ಯಮಿಗಳಿಗೆ ನೀಡಿದ್ದಾರೆ. ನಾವು ಬಂದರೆ ಜನರಿಗೆ ಬ್ಯಾಂಕ್ ಕೊಡುತ್ತೇವೆ ಎಂದು ಹೇಳಿದರು.