ಕೈಗೆ ಕಪ್ಪುಬಟ್ಟೆ ಧರಿಸಿ ಕರ್ತವ್ಯ ನಿರ್ವಹಣೆ
ಸರ್ಕಾರಕ್ಕೆ 45 ದಿನದ ಗಡುವು
ಕುಡಚಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಯಬಾಗ ತಾಲೂಕಿನ ಕುಡಚಿ ಪುರಸಭೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಕೈಗೆ ಕಪ್ಪುಬಟ್ಟೆಧರಿಸಿ ಕರ್ತವ್ಯನಿರ್ವಹಿಸುವುದರ ಮೂಲಕ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಖದೇವ ಶಿಂಧೆ ಮಾತನಾಡಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕ್ಲೀನರ್, ಲೋಡರ್ಸ, ನೀರು ಸರಬುರಾಜು ಸೇರಿದಂತೆ ವಿವಿಧ ಕೆಲಸ ನಿರ್ವಹಿಸುತ್ತಿರುವ ಎಲ್ಲ ಪೌರ ಕಾರ್ಮಿಕರನ್ನು ಸರ್ಕಾರ ಖಾಯಂ ಮಾಡಬೇಕು ಎನ್ನುವ ಕುರಿತು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮದು ಪೌರ ಕಾರ್ಮಿಕರ ಕಾರ್ಯ ಎಂದರೆ ನಿತ್ಯವೂ ಪಟ್ಟಣವನ್ನು ಚರಂಡಿ, ತ್ಯಾಜ್ಯ ಸ್ವಚ್ಛತೆ
ಕೆಲಸ ಮಾಡುವ ನಾವು ಬಹುತೇಕರು ಬಡಕುಟುಂಬದಿಂದ ಹೀಗಾಗಿ ಪದೇ ಪದೇ ಅನಾರೋಗ್ಯದಿಂದ ಬಳಲಿದರೆ ನಮಗೆ ಯಾವುದೇ ಭದ್ರತೆ ಇಲ್ಲದ್ದರಿಂದ ಈಗಾಗಲೇ ಖಾಯಂ ಆದ ಕಾರ್ಮಿಕರೆಲ್ಲರೂ ಸೇರಿದಂತೆ ಎಲ್ಲ ಕಾರ್ಮಿಕರಿಗೂ ಯಶಸ್ವಿನಿ ಆರೋಗ್ಯ ಕಾರ್ಡುಗಳನ್ನು ವಿತರಿಸುವಂತೆ ಅನೇಕ ಬಾರಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು
ಕುಡಚಿ ಪಟ್ಟಣದ ಪೌರ ಹಾಗೂ ಹೊರಗುತ್ತಿಗೆ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕೈಗೆ ಕಪ್ಪುಬಟ್ಟೆ ಧರಿಸಿ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ತಕ್ಷಣವೇ ನಮ್ಮ ಎಲ್ಲ ಪೌರ ಕಾರ್ಮಿಕರಿಗೂ ಯಶಸ್ವಿನಿ ಆರೋಗ್ಯ ಕಾರ್ಡ ವಿತರಿಸುವುದರ ಜೊತೆಗೆ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕು.
ದಿನಗೂಲಿ ನೌಕರರನ್ನು ಖಾಯಂಗೊಳಿಸಬೇಕು. ನಾವು ಕಳೆದ ಎಪ್ರೀಲ್ 11ರಿಂದ ತೋಳಿಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದು, 45ದಿನಗಳ ಕಾಲ ಪ್ರತಿಭಟನೆ ಮಾಡುತ್ತಿದ್ದು, ಅಷ್ಟರಲ್ಲಿ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹಂತ ಹಂತವಾಗಿ ಹೋರಾಟದ ರೂಪರೇಷೆಗಳು ಬದಲಾಗುತ್ತವೆ ಎಂದು ಉಪ ತಹಶೀಲ್ದಾರ್ ಎಸ.ಜಿ.ದೊಡಮನಿ, ಪುರಸಭೆ ಅಧ್ಯಕ್ಷ ಹಮಿದೊದಿನ ರೋಹಿಲೆ ಹಾಗೂ ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪೌರ ನೌಕರ ಸಂಘ ಜಿಲ್ಲಾ ಉಪಾಧ್ಯಕ್ಷರ ಸುಖದೇವ ಶಿಂಧೆ, ಕುಡಚಿ ಶಾಖೆಯ ಕಾರ್ಯಧ್ಯಕ್ಷ ವಿಜಯ ಶಿಂಧೆ, ಅಬಿದ ರೊಹಿಲೆ ರಾವಸಾಬ ಶಿಂಧೆ, ರಮೇಶ ನಡೋಣಿ, ರಾಜು ದರ್ಬಾರಿಗೆ ಹಾಗೂ ಇತರ ನೌಕರರು ಉಪಸ್ಥಿತರಿದ್ದರು.
