ಹಳ್ಳೂರ . ಎಲ್ಲಾ ಇಲಾಖೆಗಳಿಗಿಂತ ಸಾರ್ವಜನಿಕ ಶಿಕ್ಷಣ ಇಲಾಖೆ ಅತ್ಯುತ್ತಮವಾದದ್ದು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಶಿಕ್ಷಕರ ವೃತ್ತಿ ಪವಿತ್ರವಾದದ್ದು ಎಂದು ಹಳೆ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಹಾಗೂ ಗ್ರಾ ಪ ಮಾಜಿ ಅಧ್ಯಕ್ಷರಾದ ಮಾನಿಂಗ ಸನದಿ ಹೇಳಿದರು.
ಅವರು ಸೈದಾಪುರ, ಸಮೀರವಾಡಿ ಎಸ್ ವಿ ಎಮ್ ಪ್ರೌಡ ಶಾಲೆಯ ದೈಹಿಕ ಶಿಕ್ಷಕರಾದ ಬಸವರಾಜ ಕೌಜಲಗಿ ಅವರ ವಯೋ ನಿವೃತ್ತಿ ಸಮಾರಂಭದಲ್ಲಿ ಮಾತನಾಡಿ ನಮಗೆ ಶಿಕ್ಷಣ ಕಲಿಸಿದ ಹೆಮ್ಮೆಯ ಗುರುಗಳು ಇವರು ದೈಹಿಕ ಶಿಕ್ಷಕರಾಗಿ ರಾಜ್ಯ ,ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ಹೆಸರು ಬರಲಿಕ್ಕೆ ಕೌಜಲಗಿ ಸರ ಅವರೇ ಕಾರಣ. ಇಡೀ ಸಮಾಜವನ್ನೇ ತಿದ್ದುವ ಮಹಾನ ಶಕ್ತಿ ಶಿಕ್ಷಕರಲ್ಲಿ ಇದೆ ಎಂದು ಹೇಳಿದರು.

ಮುಖ್ಯ ಗುರುಗಳಾದ ವಿವೇಕಾನಂದ ಬಜೆಂತ್ರಿ ಮಾತನಾಡಿ 40 ವರ್ಷ ಸೇವೆಯಲ್ಲಿ ಯಾವುದೇ ತಂಟೆ ಕಪ್ಪು ಚುಕ್ಕೆ ಇಲ್ಲದೆ ಉತ್ತಮ ಸೇವೆ ಮಾಡಿ ಮಾದರಿ ಎಣಿಸಿ ಕೊಂಡಿದ್ದಾರೆ ವಿದ್ಯಾರ್ಥಿ ಗಳು ಹಾಗೂ ಪೋಷಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಆನೇಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದರು. ಬಸವರಾಜ ಕೌಜಲಗಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಶಿಕ್ಷಣ ಇಲಾಖೆಯು ಇಂದಿಗೂ ಮುಂದಿಗೂ ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ಇಲಾಖೆಯಾಗಿದೆ. ಶಿಕ್ಷಕ ವೃತ್ತಿ ಜೀವನ ನನಗೆ ಸಂತೋಷವೆನಿಸಿದೆ. ಅನೇಕ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಕಲಿತು ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಹಳೆಯ ವಿದ್ಯಾರ್ಥಿಗಳು ಟಿ ವಿ ಎಸ್ ಬೈಕ್, ಟಜರಿ,10 ಗ್ರಾಂ ಬಂಗಾರ, ಬೆಳ್ಳಿ ಸಮೆ , ಮಾಹಾನ ಮೇಧಾವಿಗಳ ಬಾವಚಿತ್ರವನ್ನು ನೀಡಿ ಗೌರವಿಸಿದರು. ವಿನಯ ಹೆಗ್ಗಳಗಿ. ವಿವೇಕಾನಂದ ಮಲಕಾಪೂರ. ರಾಜಾಸಾಬ್ ನದಾಫ. ಮಲೀಕ ಮಾಲದಾರ. ಭೀಮಶಿ ನಿಪನಾಳ. ಬಸಪ್ಪ ಹರಿಜನ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ.ಶಿಕ್ಷಕರಾದ ಸೋಮಲಿಂಗ ಕನಕರಡ್ಡಿ. ಐ ಬಿ ಹೀರೆಸೋಮಣ್ಣವರ. ಎಸ್ ಎಸ್ ನಡುವಿನಮನಿ.ಎಸ್ ಬೀ ಬುಸರಡ್ಡಿ. ಸದಾಶಿವ ಕುಂಬಾರ. ಶ್ರೀಶೈಲ ಪಾಶ್ಚಾಪೂರ. ಗೋಪಾಲ ದರ್ಮಟ್ಟಿ. ಸಂತೋಷ ಮುಗಳಿ. ಶಶಿಕಲಾ ಮೋಜನಿದಾರ. ವಿಜಯಲಕ್ಷ್ಮಿ ಅಂಕಲಗಿ. ಎಸ್ ಬಿ ಕೋಳಿ. ಮಾದೇವ ಶಿವಕ್ಕಗೊಳ ಸೇರಿದಂತೆ ವಿದ್ಯಾರ್ಥಿಗಳಿದ್ದರು.
ಸಿದ್ದು ಮಹಾರಾಜ ಹಳ್ಳೂರ ಸಾಹಿತಿಗಳು ಬಸವರಾಜ್ ಕೌಜಲಗಿ ಅವರ ಅಭಿನಂದನ ಗೀತೆಯನ್ನು ರಚನೆ ಮಾಡಿದ್ದೂ ಬಿಡುಗಡೆ ಗೊಳಿಸಿದರು. ಶ್ರೇಯಾ ಮರಸಿದ್ದನ್ನವರ ಕೌಜಲಗಿ ಸರ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು.





