ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ನಾಮಪತ್ರಕ್ಕೆ ಜನಸಾಗರ

Share the Post Now

ಅಥಣಿ:ಅಥಣಿ  ವಿಧಾನಸಭಾ ಮತಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.ಅಥಣಿ ಮೊನ್ನೆಯಷ್ಟೇ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಇವತ್ತು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಇದಕ್ಕೂ ಮುನ್ನ ತಮ್ಮ ಸ್ವನಿವಾಸದಿಂದ ರೋಡಶೋ ಮೂಲಕ ಪ್ರಾರಂಭವಾದ ರೋಢಶೋ ಡಾ.ಬಿ.ಆರ್. ಅಂಬೇಡ್ಕರ್ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಪಡೆದು ನಂತರ ಸಾಗರೋಪಾದಿಯಲ್ಲಿ ಆಗಮಿಸಿದ ತಮ್ಮ ಕಾರ್ಯಕರ್ತರ ಪಡೆಯೊಂದಿಗೆ ಆಗಮಿಸಿ ತಹಶಿಲ್ದಾರ ಕಛೇರಿಯಲ್ಲಿ ಚುನಾವಣಾಧಿಕಾರಿಯವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇವತ್ತು ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ  ಬಹಳ ದೊಡ್ಡ ಪ್ರಮಾಣದಲ್ಲಿ ಪಕ್ಷದ ಹಿರಿಯರು ಕಾರ್ಯಕರ್ತರು ಬೆಂಬಲ ನೀಡಿದ್ದಾರೆ.ಅತೀ ಹೆಚ್ಚಿನ ಅಂತರದಿಂದ ನಾನು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ.11 ಜನ ಟಿಕೆಟ್ ಆಕಾಂಕ್ಷಿಗಳಿದ್ದರು ಅವರೆಲ್ಲ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಬೆಂಬಲವಾಗಿ ನಿಂತಿದ್ದಾರೆ ಒಟ್ಟಾಗಿ ಚುನಾವಣೆ ಎದುರಿಸೋಣ ಎಂದಿದ್ದಾರೆ ಎಂದರು.

ಆರ್ ಎಸ್ ಎಸ್ ನವರ ಹಿಡಿತದಲ್ಲಿ ನೀವು ಗೆಲುವು ಸಾಧಿಸುತ್ತೀರಾ? ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರೀಯಿಸಿದ ಅವರು,ಆರ್ ಎಸ್ ಎಸ್ ನಲ್ಲಿ ನನ್ನ ಹಿತೈಷಿಗಳು ಇದ್ದಾರೆ ಅವರು ನನಗೆ ಗುಪ್ತ ಮತದಾನ ಮಾಡುವ ಮೂಲಕ ಬೆಂಬಲಿಸುತ್ತಾರೆ.ಆಂತರಿಕವಾಗಿ ನನಗೆ ಸಹಾಯ ಮಾಡುತ್ತಾರೆ.ಅವರು ನೂರಕ್ಕೆ ನೂರರಷ್ಟು ನನಗೆ ಮತ ಹಾಕುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ,ಧರೆಪ್ಪ ಠಕ್ಕಣ್ಣನವರ,ಸದಾಶಿವ ಬುಟಾಳಿ,ಚಿದಾನಂದ ಸವದಿ,ಶಿವಕುಮಾರ ಸವದಿ,ಅಸ್ಂ ನಾಲಬಂದ,ಶಿವು ಗುಡ್ಡಾಪೂರ, ಸಿದ್ದಾರ್ಥ ಸಿಂಗೆ,ಮಯೂರ ಸಿಂಗೆ,ಸುನೀತಾ ಐಹೊಳೆ,ರೇಖಾ ಪಾಟೀಲ, ಸವಿತಾ ಸಿಂಗೆ,ಕಲ್ಲಪ್ಪ ಮಡ್ಡಿ,ಶಿವಾನಂದ ಸೌದಾಗರ,ಮಹಾಂತೇಶ ಬಾಡಗಿ,ಸೇರಿದಂತೆ ಅನೇಕರು ಇದ್ದರು.

Leave a Comment

Your email address will not be published. Required fields are marked *

error: Content is protected !!