ಬೆಂಗಳೂರು: ಆಂಟೀರ ಬೆನ್ನು ಬಿದ್ದ ಕಾಮುಕ, ಹೆಸ್ರು ಫೈಸಲ್ ಆಲಿಯಾಸ್ ಜಮೀರ್ ಜಾನ್. ವಯಸ್ಸು 35 ವರ್ಷ. ಈತ ಮೂಲತಃ ಅಸ್ಸಾಂನ ನಿವಾಸಿ. ಆಂಟೀರನ್ನ ತನ್ನ ಗಾಳಕ್ಕೆ ಬೀಳಿಸೋದಕ್ಕೆ ಇನ್ಟಗ್ರಾಮ್ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ತಿದ್ದ. ಕಲರ್ ಕಲರ್ ಡೈಲಾಗ್ ಹೊಡೆದು ಸಲೀಸಾಗಿ ಲಕ್ಷ ಲಕ್ಷ ಪೀಕ್ತಿದ್ದ
ಈತ ಇನ್ಟಗ್ರಾಮ್ನಲ್ಲಿ ಬ್ಯೂಟಿಫುಲ್ ಆಂಟೀರ ಪ್ರೊಫೈಲ್ ನೋಡಿ ಫಾಲೋ ಮಾಡ್ತಿದ್ದ, ಅಕ್ಸೆಪ್ಟ್ ಮಾಡಿದ್ರೇ ಸಾಕು ಕಲರ್ ಕಲರ್ ಡೈಲಾಗ್ ಹೊಡೆದು ಬೀಳಿಸ್ತಿದ್ದ. ಹೆಣ್ಣುಮಕ್ಕಳ ಫ್ರೀಡಂ, ಅಂಕಲ್ಗಳ ವೀಕ್ನೆಸ್ ಬಗ್ಗೆ ಮಾತಾಡಿ ತನಗೆ ಹತ್ರ ಮಾಡ್ಕೋತಿದ್ದ. ನಂತರ ಮೀಟಿಂಗ್ ಶುರು ಮಾಡಿ ದೈಹಿಕ ಸಂಪರ್ಕಕ್ಕೆ ಗಾಳ ಹಾಕ್ತಿದ್ದ. ಖಾಸಗಿ ಜಾಗಕ್ಕೆ ಕರೆದು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಮಾಡ್ತಿದ್ದ.
ಇಲ್ಲಿಗೆ ಮುಗ್ದಿಲ್ಲ ಈತನ ಕರಾಮತ್, ಆಂಟಿರ ಜೊತೆ ಖಾಸಗಿ ಕ್ಷಣಗಳನ್ನ ರೆಕಾರ್ಡ್ ಮಾಡಿಕೊಳ್ತಿದ್ದ ಆರೋಪಿ. ನಂತರ ಲಕ್ಷ ಲಕ್ಷ ಹಣ ಕೇಳ್ತಿದ್ದ, ಮತ್ತೆ ಮತ್ತೆ ಪೀಡಿಸ್ತಿದ್ದ. ಹಣ ಕೊಡದಿದ್ರೆ ಗಂಡನಿಗೆ ವಿಡಿಯೋ ಕಳಿಸೋದಾಗಿ ಬೆದರಿಕೆ ಹಾಕ್ತಿದ್ದ.ಸದ್ಯ ಹಲವರಿಗೆ ವಂಚಿಸಿರೋ ಆರೋಪಿ ಫೈಸಲ್ HSR ಲೇಔಟ್ ಪೊಲೀಸರ ಕೈಯಲ್ಲಿ ಲಾಕ್ ಆಗ್ಬಿಟ್ಟಿದ್ದಾನೆ. ಅದೇನೆ ಇರ್ಲಿ ಇನ್ಟಗ್ರಾಮ್ನಲ್ಲಿ ಅಪರಿಚರ ಜೊತೆ ಮಾತನಾಡೋ ಮುನ್ನ ಎಚ್ಚರ ವಹಿಸಿ!