ಬೆಳಗಾವಿ :ಸಂಬಳ ನೀಡದ ಕಾರಣಕ್ಕೆ ಕ್ಲೀನಿಂಗ್ ಗುತ್ತಿಗೆದಾರ ಮತ್ತು ಮೇಲ್ವಿಚಾರಕರಿಂದ ಕಿರುಕುಳ ತಾಳಲಾರದೆ ಪೌರಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ. ಬೆಳಗಾವಿಯ ಗಣೇಶಪುರದ ಕ್ರಾಂತಿ ನಗರದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಗಣೇಶಪುರದ ಕ್ರಾಂತಿ ನಗರದಲ್ಲಿ ವಾಸವಾಗಿದ್ದ ಯುವ ಕಾರ್ಮಿಕ ಶಶಿಕಾಂತ ಸುಭಾಷ್ ಢವಳೆ ಗುರುವಾರ ರಾತ್ರಿ 1:30ರ ಸುಮಾರಿಗೆ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಶಿಕಾಂತ ಢವಳೆ ಅವರು ಕಳೆದ ಹನ್ನೆರಡು ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎನ್. ಡಿ. ಪಾಟೀಲ್ ಸ್ವಚ್ಛತಾ ಗುತ್ತಿಗೆದಾರರೊಬ್ಬರ ಬಳಿ ಕೂಲಿ ಕೆಲಸ ಮಾಡುತ್ತಿದ್ದರು. ಆರ್ಥಿಕ ತೊಂದರೆಯಿಂದ ಗುತ್ತಿಗೆದಾರ ಪಾಟೀಲ ಎಂಬುವವರಿಂದ ಶೇ.20ರ ಬಡ್ಡಿಗೆ 80 ಸಾವಿರ ರೂ. ಸಾಲ್ ಪಡೆದು 1 ಲಕ್ಷದ 30 ಸಾವಿರ ರೂಪಾಯಿಯನ್ನು ಬಡ್ಡಿ ಸಮೇತ ಕೊಟ್ಟಿದ್ದನ್ನು . ಆದರೆ, ಗುತ್ತಿಗೆದಾರ ಎನ್. ಡಿ. ಪಾಟೀಲ ಮತ್ತು ಅವರ ಮೇಲ್ವಿಚಾರಕ ಶಂಕರ ಅಷ್ಟೇಕರ ಅವರು ಹೆಚ್ಚಿನ ಹಣ ನೀಡುವಂತೆ ಕಿರುಕಳ ನೀಡಿದ್ದರು . ಇದಲ್ಲದೇ ಹಲವು ತಿಂಗಳಿಂದ ಶಶಿಕಾಂತ್ ಅವರ ವೇತನ ನೀಡಿರಲಿಲ್ಲ . ಹಾಗಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿ ದುಡಿದರೂ ಕೂಲಿ ಸಿಗದೆ ಬಡ್ಡಿ ಕಟ್ಟಿ ಬೇಸತ್ತು , ಕುಡಿದ ಅಮಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಬಗ್ಗೆ ಅವರ ಸಹೋದರಿ ಮೀನಾಕ್ಷಿ ದೀಪಕ್ ಲಾಖೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರತಿ ತಿಂಗಳು ಗುತ್ತಿಗೆದಾರರು ಸಾಲ ಮತ್ತು ಬಡ್ಡಿಯಾಗಿ ಶಶಿಕಾಂತ್ ಅವರಿಂದ ಸಂಬಳ ಪಡೆಯುತ್ತಿದ್ದರು ಎಂದು ಶಶಿಕಾಂತ್ ಪತ್ನಿ ಪ್ರಿಯಾಂಕಾ ಹೇಳಿದ್ದಾರೆ. ಹೆಚ್ಚಿನ ಹಣ ನೀಡಬೇಕೆಂದುಕೊಂಡ ಗುತ್ತಿಗೆದಾರ ಪಾಟೀಲ ಹಾಗೂ ಮೇಲ್ವಿಚಾರಕ ಶಂಕರ ಅಷ್ಟೇಕರ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಶಶಿಕಾಂತ್ ಮದ್ಯಪಾನ ಮಾಡಿದ್ದ. ಇದರಿಂದ ನಿನ್ನೆ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಎದ್ದಾಗ ಈ ರೀತಿಯ ವಿಷಯ ನಮ್ಮ ಗಮನಕ್ಕೆ ಬಂದಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಇದೇ ವೇಳೆ ಪೌರಕಾರ್ಮಿಕ ಶಶಿಕಾಂತ್ ಆತ್ಮಹತ್ಯೆಗೆ ಬೆಳಗಾವಿಯಲ್ಲಿ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅವರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾವು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ದಲಿತ ಮುಖಂಡ ಮಲ್ಲೇಶ ಚೌಗುಲೆ, ಶಶಿಕಾಂತ ಢವಳೆ ಕಳೆದ 10-12 ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನೈರ್ಮಲ್ಯ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರೂ ವೈಯಕ್ತಿಕ ಆರ್ಥಿಕ ತೊಂದರೆಯಿಂದ ಪಾಟೀಲ್ ಅವರಿಂದ 80 ಸಾವಿರ ರೂ. ಗುತ್ತಿಗೆದಾರರು ಚಕ್ರಬಡ್ಡಿ ವಸೂಲಿ ಮಾಡಿದ್ದಾರೆ . ಶಶಿಕಾಂತ್ 80 ಸಾವಿರಕ್ಕೆ 1 ಲಕ್ಷದ 30 ಸಾವಿರ ರೂಪಾಯಿ ವಾಪಸ್ ನೀಡಿದರೂ ಹೆಚ್ಚಿನ ಹಣಕ್ಕಾಗಿ ಗುತ್ತಿಗೆದಾರ ಎನ್. ಡಿ. ಪಾಟೀಲ್ ಮತ್ತು ಅವರ ಮೇಲ್ವಿಚಾರಕ ಶಂಕರ ಅಷ್ಟೇಕರ್ ಶಶಿಕಾಂತ್ ಗೆ ಚಿತ್ರಹಿಂಸೆ ನೀಡುತ್ತಿದ್ದರು. ಒಟ್ಟು ಒಂದೂವರೆ ಲಕ್ಷ ರೂಪಾಯಿ ನೀಡುವಂತೆ ಶಶಿಕಾಂತ್ ಅವರ ಸಂಬಳವನ್ನೂ ತಡೆ ಹಿಡಿದಿದ್ದರು. ಅವರಿಗೆ ಪತ್ನಿ ಹಾಗೂ ನಾಲ್ವರು ಮಕ್ಕಳಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ತಳಮಟ್ಟದ ಡೊಂಬರಿ ಸಮುದಾಯದ ಶಶಿಕಾಂತ್ ಅವರ ಆರ್ಥಿಕ ಸ್ಥಿತಿ ಹೀನಾಯವಾಗಿದೆ. ಹೀಗಾಗಿ ಅವರ ಆತ್ಮಹತ್ಯೆಗೆ ಕಾರಣರಾದ ಗುತ್ತಿಗೆದಾರ ಎನ್. ಡಿ. ಪಾಟೀಲ ಹಾಗೂ ಮೇಲ್ವಿಚಾರಕ ಶಂಕರ ಅಷ್ಟೇಕರ ಅವರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಹಾಗೂ ಪತ್ನಿಗೆ ಕೂಲಿ ನೀಡಬೇಕು ಎಂದು ಮಲ್ಲೇಶ ಚೌಗುಲೆ ಎಚ್ಚರಿಸಿದರು.
ಇದೇ ವೇಳೆ ಶಶಿಕಾಂತ್ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಗಣೇಶಪುರದ ಡೊಂಬರಿ ಸಮಾಜದ ನಾಗರಿಕರು ಕ್ಯಾಂಪ್ ಪೊಲೀಸ್ ಠಾಣೆ ಎದುರು ಕೆಲಕಾಲ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಒಟ್ಟಿನಲ್ಲಿ ಗುತ್ತಿಗೆದಾರ ಹಾಗೂ ಮೇಲ್ವಿಚಾರಕರ ಕಿರುಕುಳ ತಾಳಲಾರದೆ ಕಾರ್ಮಿಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ . ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕು.