ಮೈಸೂರು: ಅನ್ಯಜಾತಿಯ ಯುವಕನನ್ನು ಮದುವೆಯಾಗಿದ್ದ ಹಿನ್ನೆಲೆಯಲ್ಲಿ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವರಿಗೆ ಸಂಬಂಕರು ಅಡ್ಡಿಪಡಿಸಿದ ಘಟನೆ ಮೈಸೂರು ಜಿಲ್ಲೆಯ ಹೆಚ್‍ಡಿ ಕೋಟೆ ತಾಲ್ಲೂಕಿನ ನಾಗನಹಳ್ಳಿಯಲ್ಲಿ ನಡೆದಿದೆ.
ಹೆಚ್‍ಡಿ ಕೋಟೆಯ ಕಳಸಮ್ಮ ಎಂಬುವವರು ನಿನ್ನೆ ಮೃತಪಟ್ಟಿದ್ದರು. ಅವರ ಅಂತ್ಯಕ್ರೀಯೆಯನ್ನು ನಡೆಸಲು ಅವರ ಸಂಬಂಧಿಕರು ಸಿದ್ದತೆ ಮಾಡಿದರು. ಇವರ ಇಬ್ಬರು ಹೆಣ್ಣುಮಕ್ಕಳು ಅನ್ಯ ಜಾತಿಯವರನ್ನು ಮದುವೆಯಾಗಿದ್ದರು ಎಂಬ ಕಾರಣಕ್ಕೆ ಅವರನ್ನು ಅಂತಿಮ ದರ್ಶನಕ್ಕೂ ತಡೆಯಲಾಗಿತ್ತು