ಹಳ್ಳೂರ . ಗ್ರಾಮದ ನಿವಾಸಿಗಳಾದ ಮಹಾಂತೇಶ ಸುಭಾಸ ಬಳಿಗಾರ ವಯಸ್ಸು 33 ಗುರುವಾರ ದಿ 2 ರಂದು ನಿಧನರಾದರು. ಸಹೋದರ ರವಿ ಸುಭಾಸ ಬಳಿಗಾರ ವಯಸ್ಸು 28 ಶನಿವಾರ ದಿ 4 ರಂದು ಮುಂಜಾನೆ ನಿಧನರಾಗಿದ್ದಾರೆ. ಮೃತರಿಗೆ ತಾಯಿ, ಓರ್ವ ಸಹೋದರ, ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ. ಕುಟುಂಬವು ಸಾವಿನ ದುಃಖ ದುಮ್ಮಾನಗಳಲ್ಲಿ ತೊಡಗಿ ಕುಟುಂಬವು ದುಃಖದ ಮಡುವಿನಲ್ಲಿ ಬಿದ್ದಿದ್ದು ನೋವನ್ನುಂಟು ಮಾಡಿದೆ.
ದುರ್ದೈವಶಾತ ಇಬ್ಬರಿಗೂ ವಿವಾಹವಾಗಿರುವದಿಲ್ಲ ಕಾಲಿ ಬಂದು ಕಾಲಿ ಹೋದಂತಾಗಿದೆ. ತಾಯಿ ಲಕ್ಷ್ಮೀಬಾಯಿ ಅವರು ಚಿಕ್ಕ ವಯಸ್ಸಿನಲ್ಲಿಯೇ ಇಬ್ಬರೂ ಮಕ್ಕಳನ್ನು ಕಳೆದುಕೊಂಡಿದ್ದು ಹಾಗೂ ಪತಿ ಹತ್ತು ವರ್ಷಗಳ ಹಿಂದೆ ಸಾವನ್ನಪ್ಪಿದ್ದು ನೋಡಿ ಅವರ ಅಳಿಲು ಮುಗಿಲು ಮುಟ್ಟಿತ್ತು ಮೂವರು ವಿಪರೀತ ಮದ್ಯ ಕುಡಿತಕ್ಕೆ ಒಳಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಜೀವನ ಕಳೆದುಕೊಂಡಿದ್ದು ಆಘಾತವಾದ ದುಃಖಕರ ಸಂಗತಿಯಾಗಿದೆ.ಗ್ರಾಮದಲ್ಲಿ ಇತ್ತೀಚಿಗೆ ಅವಿವಾಹಿತ ಯುವಕರು ಅತಿಯಾದ ಮಧ್ಯ ಕುಡಿತ ಚಟಕ್ಕೆ ಬಲಿಯಾಗಿ ಸಾವನ್ನಪ್ಪುತ್ತಿದ್ದು ಕಂಡು ದುಃಖಕರ ಸಂಗತಿಯಾಗಿದೆ.
ಹಿಂದಿನ ಕಾಲದಿಂದಲೂ ಭಾರತೀಯ ಸಂಸ್ಕೃತಿಗೆ ತಕ್ಕಂತೆಯಿದ್ದು ಮುಂಜಾನೆ ಸಮಯದಲ್ಲಿ ಮೊದಲು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಕೆಲಸ ಕಾರ್ಯಗಳಲ್ಲಿ ತೊಡುಗುವುದು ವಾಡಿಕೆಯಿದೆ ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಮುಂಜಾನೆ ಎದ್ದು ಸರಾಯಿ ಅಂಗಡಿಗೆ ಹೋಗಿ ಕುಡಿದು ಕೆಲಸ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ.ಮೊಬೈಲ್ ದುಶ್ಚಟಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಕ್ಕೆ ಬಲಿಯಾಗದೆ ಒಳ್ಳೆಯವರಾಗಿದ್ದರೆ ತಮಗೂ ಒಳ್ಳೇದು ತಮ್ಮ ಕುಟುಂಬಕ್ಕೂ ಒಳ್ಳೆಯದಾಗುತ್ತದೆ.