ಸಾರ್ವಜನಿಕರ ಸೇವೆಗೆ ಜೀವನ ಮುಡುಪಾಗಿರಲಿ :ತಹಶೀಲ್ದಾರ ಪ್ರಶಾಂತ ಎಸ್ ಚನಗೊಂಡ

Share the Post Now

ವರದಿ :ಮುರಿಗೆಪ್ಪ ಮಾಲಗಾರ

ಹಳ್ಳೂರ . ಪ್ರತಿಯೊಬ್ಬ ಅಧಿಕಾರಿ ತಮಗೊದಗಿ ಬಂದ ನೌಕರಿ ಎಂದು ತಿಳಿಯದೆ ಬಡವರ ಸಾರ್ವಜನಿಕರ ಸೇವೆಗೆ ಜೀವನ ಮುಡುಪಾಗಿರಲಿ ಎಂಬ ಭಾವನೆಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ನೆಮ್ಮದಿ ಸಾಧ್ಯವೆಂದು ನಿಕಟಪೂರ್ವ ತಹಶೀಲ್ದಾರ ಪ್ರಶಾಂತ ಎಸ್ ಚನಗೊಂಡ ಹೇಳಿದರು.


ಮೂಡಲಗಿ ತಹಶೀಲ್ದಾರ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಗಳ ಸಹಯೋಗದಲ್ಲಿ ಹಮ್ಮಿಕೊಂಡ ತಹಶೀಲ್ದಾರರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕರ್ತವ್ಯಕ್ಕೆ ಬಂದಾಗಿನಿಂದ ಸಾಮಾನ್ಯ ಜನರು ಹಾಗೂ ಕಛೇರಿ ಸಿಬ್ಬಂದಿಗಳು ಕೂಡಾ ತಮ್ಮನ್ನು ಸಂದರ್ಶನಕ್ಕೆ ಬಂದ ಸಮಸ್ಯೆಗೆ ಶೀಘ್ರ ಪರಿಹಾರ ಬಗೆಹರಿಸಿಕೊಳ್ಳಲು ಅವಕಾಶ ನೀಡಿದ ಕಾರ್ಯ ನನಗೆ ತೃಪ್ತಿದಾಯಕವಾಗಿದೆ. ಅನೇಕ ಕೆಲಸಗಳನ್ನು ಕಡಿಮೆ ಅವಧಿಯಲ್ಲಿ ಮಾಡಿ ಮುಗಿಸಿದ್ದೇವೆ ಯಾವುದೇ ಕೆಲಸಕ್ಕೆ ಸಿಬ್ಬಂದಿಗಳ ಸಹಕಾರ ಅತೀ ಅವಶ್ಯಕತೆವಿದೆ.ನಾವು ಬೇರೆ ಕಡೆ ವರ್ಗಾವಣೆ ಆದರೂ ಜನರ ಮನದಾಳದಲ್ಲಿ ಸದಾ ಇರುವ ಹಾಗೆ ಕಾರ್ಯ ನಿರ್ವಹಿಸಬೇಕು ಅಧಿಕಾರ ಯಾವುದು ಸ್ಥಿರವಲ್ಲ ಜನರಿಗೆ ನಮ್ಮಿಂದ ಸಹಕಾರ ನೀಡಿದ್ದು ಮುಖ್ಯವೆಂದು ಹೇಳಿದರು.


ಶಿವಾನಂದ ಅ ಬಬಲಿ ನೂತನ ಗ್ರೇಡ್ 1 ತಹಶೀಲ್ದಾರರಾಗಿ ಪದಗ್ರಹಣ ಅಧಿಕಾರ ವಹಿಸಿಕೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿ ಈಗಾಗಲೇ ಗ್ರೆಡ್ ॥ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸಿದ್ದು ತೃಪ್ತಿ ತಂದಿದೆ. ತಹಸೀಲ್ದಾರ್ ಸೇವೆಯನ್ನು ನಾನು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಜನ ಸಾಮಾನ್ಯರ ಪ್ರೀತಿಗೆ ಪಾತ್ರರಾಗಿ, ಜಿಲ್ಲೆಯಲ್ಲಿ ಮೂಡಲಗಿ ತಾಲೂಕು ಪ್ರಥಮ ಪ್ರಾಶಸ್ತ್ಯ ಪಡೆಯಲು ಎಲ್ಲರೂ ಒಳ್ಳೆಯ ಮನೋಭಾವನೆಯಿಂದ ಕೆಲಸದಲ್ಲಿ ಬಾಗಿಯಾಗೋಣ ಇದಕ್ಕೆ ಎಲ್ಲಾ ಸಿಬ್ಬಂದಿಯವರ ಸಹಕಾರ ನೀಡಬೇಕು ಎಂದು ಹೇಳಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಜನರೊಡನೆ ಬೆರೆತು ಸಹಕಾರ ಮನೋಭಾವನೆ ಕೆಲಸಕ್ಕೆ ಯಾವುದೇ ಅಡೆ ತಡೆವಿಲ್ಲದೆ ಸೌಜನ್ಯ ಸ್ವಭಾವ್ ಜಾಣತನದಿಂದ ಸಾರ್ವಜನಿಕರಿಗೆ ಸ್ಪಂದನೆ ನೀಡುತ್ತಿದ್ದ ತಹಸೀಲ್ದಾರ್ ಚನಗೊಂಡ ಅವರು ಉಪ ವಿಭಾಗಾಧಿಕಾರಿಯಾಗಿ ನಮ್ಮ ಜಿಲ್ಲೆಗೆ ಬರಲಿ ಎಂದು ಹಾರೈಸಿದರು. ತಾಲೂಕು ಪ ಕಾರ್ಯ ನಿರ್ವಾಹಕ ಅಧಿಕಾರಿ ಎಫ್ ಸಿ ಚಿನ್ನನವರ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಯಲ್ಲಪ್ಪ ಗದಾಡಿ. ಶಿರಸ್ತೇದಾರ್ ಪರಸಪ್ಪ ನಾಯಿಕ, ಕಂದಾಯ ನಿರೀಕ್ಷಕ ಸಂಗಣ್ಣ ಹೊಸಮನಿ. ಕಾಂಬಳೆ , ಗ್ರಾಮ ಆ ಅಧಿಕಾರಿ ಸಂಘದ ಅಧ್ಯಕ್ಷ ಸಂತೋಷ ಪಾಶ್ಚಾಪೂರ.ವರ್ಗಾವಣೆಯಾದ ಗ್ರಾಮ ಆಡಳಿತ ಅಧಿಕಾರಿ ಸಂತೋಷ ಕೊತ್ಯಾಗೊಳ ಮೊದಲಾದವರು ಮಾತನಾಡಿದರು.


ಈ ಸಮಯದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಎಸ್ ಎ ಬಾಗವಾನ. ಸುರೇಶ ತುಪ್ಪದ. ಸಂಜು ಅಗ್ನೆಪ್ಪಗೋಳ. ಗೋಪಾಲ ಮುತ್ತೆಪ್ಪಗೊಳ. ಕೇದಾರಲಿಂಗ ಬಾಸಗಿ. ಎ ಎಸ್ ಲಾಡಕಾನ್. ಪಕರುದ್ದಿನ ಪತ್ತೇಕಾನ. ಏಮ್ ಎ ಮುಲ್ಲಾ.ಮಾಂತೇಶ ಹೊಳ್ಕರ. ಈರಣ್ಣ ಪಾರ್ಸಿ.ಹಣಮಂತ ಮೇಳ್ಳಿಗೆರಿ. ಗ್ರಾಮ ಸ ಸಂಘ ಅದ್ಯಕ್ಷ ಭೀಮಶಿ ಸೊರಗಾಂವಿ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಸಿಬ್ಬಂದಿಗಳಾದ ಯಶವಂತ ಉದ್ದಪ್ಪನವರ.ಮಾಂತೆಶ ಕರಿಗಾರ. ಎಮ್ ಎ ಮುದಗಲ್. ಸಿದ್ದು ಬಿಸ್ವಾಗರ. ಉದ್ದಪ್ಪ ಹಳ್ಳೂರ. ಪರಸು ಕುಂಬಾರ. ವಿಠ್ಠಲ ಮಾನಗಾಂವೆ. ಸುನೀಲ ದೇಸಾಯಿ. ಮಾಸ್ತಮರಡಿ. ಸುರೇಖಾ ಇರಕರ. ಸೀಮಾ ಗಸ್ತಿ.ಮಲ್ಲು ಉಳ್ಳಾಗಡ್ಡಿ ಸೇರಿದಂತೆ ಸಿಬ್ಬಂದಿಗಳಿದ್ದರು. ಕಾರ್ಯಕ್ರಮವನ್ನು ಕಛೇರಿಯ ಶಿರಸ್ತೇದಾರ ಪರಸಪ್ಪ ನಾಯಿಕ ನಿರೂಪಿಸಿದರು. ಅಕ್ಷಯ ಅವಾಡೆ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!