ಬೆಳಗಾವಿ. ಅಥಣಿ
ಅಥಣಿ: “ರಾಜ್ಯದ ಚುನಾವಣೆ ಬೇರೆ, ಅಥಣಿ ಚುನಾವಣೆಯೇ ಬೇರೆಯಾಗಿದ್ದು, ಡಬಲ್ ಇಂಜಿನ್ ಸರ್ಕಾರದ ಸಲುವಾಗಿ ಬಿಜೆಪಿಗೆ ಮತ ಹಾಕಿ ಹಾಗೂ ಅಥಣಿಯಲ್ಲಿ ಪಕ್ಷಕ್ಕೆ ಮೋಸ ಮಾಡಿದ ಲಕ್ಷ್ಮಣ ಸವದಿ ಅವರನ್ನು ಸೋಲಿಸಲು ಮತ ಹಾಕಿ’ ಎಂದು ಲಕ್ಷ್ಮಣ ಸವದಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತದಾರರಿಗೆ ಕರೆ ನೀಡಿದರು.
ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ್ ಪರವಾಗಿ ಪ್ರಚಾರ ಸಮಾರಂಭದಲ್ಲಿ ಮಾತನಾಡಿದರು. ”ಲಕ್ಷ್ಮಣ ಸವದಿಯನ್ನು ಕಳೆದ ಚುನಾವಣೆಯಲ್ಲಿ ಸೋಲಿಸಿದ್ದು ಮಹೇಶ್ ಕುಮಠಳ್ಳಿ. ಆದ್ರೂ ಸಹ ಸವದಿಯನ್ನು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಮಾಡಿದ್ದೆವು. ಸೋತಾಗ ನಾನೇ ಸವದಿ ಜೊತೆಗೆ ಮಾತಾಡಿದೆ. ಅವರನ್ನೇ ನಾವು ಎಂಎಲ್‌ಸಿ ಮಾಡಿದ್ವಿ, ಮಂತ್ರಿ ಮಾಡಿದ್ವಿ, ಎಂಎಲ್‌ಸಿ ಅವಧಿ ಇದ್ರೂ ಯಾಕೆ ಪಕ್ಷ ಬಿಟ್ರೇ ಅಂತಾ ನೀವು ಪ್ರಶ್ನೆ ಮಾಡಬೇಕು. ಪಕ್ಷ ಬಿಟ್ಟು ಹೋಗಿ ಕಾಂಗ್ರೆಸ್ ಸೇರಿಕೊಂಡ್ರಿ, ಭಜರಂಗಬಲಿಗೆ ಅವಮಾನ ಮಾಡುವ ಪಕ್ಷ ಸೇರಿಕೊಂಡ್ರಿ, ಕಾಂಗ್ರೆಸ್ ನವರು ಮುಸ್ಲಿಂರಿಗೆ ಮೀಸಲಾತಿ ಕೊಡ್ತೀವಿ ಅಂತಿದ್ದಾರೆ. ಲಿಂಗಾಯತರ ಮೀಸಲಾತಿ ಕಿತ್ತುಕೊಂಡು ಮುಸ್ಲಿಂ ಸಮುದಾಯಕ್ಕೆ ಕೊಡ್ತೀರಾ? ಬಯ್ಯಾ ಲಕ್ಷ್ಮಣ ಪದೇ ಪದೇ ನನ್ನ ಬಳಿ ಮಹದಾಯಿ ಯೋಜನೆಗಾಗಿ ಬರ್ತಿದ್ರೀ, ನೀರಾವರಿ ಯೋಜನೆ ಸಲುವಾಗಿ ನನ್ನ ಬಳಿ ಬಂದಾಗ ಕಾಂಗ್ರೆಸ್‌ಗೆ ಬೈಯ್ಯುತ್ತಿದ್ರಿ ಇವತ್ತೇನಾಗಿದೆ” ಎಂದು ಶಾ ಕಿಡಿಕಾರಿದ್ರು.

ನೀವು ಬೈಯ್ದಷ್ಟು ಕಮಲ ಅರಳಲಿದೆ: “ಸೋನಿಯಾ ಗಾಂಧಿ ಗೋವಾ ಚುನಾವಣೆ ವೇಳೆ ಕರ್ನಾಟಕಕ್ಕೆ ಮಹದಾಯಿ ನೀರು ಕೊಡಲ್ಲಾ ಅಂದಿದ್ರು. ಆದ್ರೆ, ಸೋನಿಯಾ ಗಾಂಧಿನೂ ಹೋದ್ರೂ, ಅವರ ಪಕ್ಷವೂ ಗೋವಾದಿಂದ ಹೋಯಿತು. ಮೋದಿ ಬಂದ ಮೇಲೆ ಉತ್ತರ ಕರ್ನಾಟಕಕ್ಕೆ ಮಹದಾಯಿ ನೀರು ಕೊಡುವ ಕೆಲಸ ಆಗಿದೆ. ಜಾರಕಿಹೊಳಿ ಮತ್ತು ಮಹೇಶ್ ಬಂದ ಮೇಲೆ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ರಾಹುಲ್ ಬಾಬಾ ಐದು ಗ್ಯಾರಂಟಿ ಕೊಟ್ಟಿದ್ದಾರೆ. ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ, ಅನ್ನೋಂ, ಮಣಿಪುರ, ನಾಗಾಲ್ಯಾಂಡ್, ತ್ರಿಪುರದಲ್ಲಿ ಐದು ಗ್ಯಾರಂಟಿ ಕೊಟ್ಟಿದ್ದಿರಿ. ಎಲ್ಲ ಕಡೆ ನಿಮ್ಮನ್ನು ಜನ ಸೋಲಿಸಿದ್ದಾರೆ. ಕರ್ನಾಟಕದಲ್ಲಿ ನಿಮ್ಮ ಗ್ಯಾರಂಟಿಯನ್ನು ಯಾರೂ ಕೂಡ ನಂಬಲ್ಲ. ಮೋದಿ ಅವರನ್ನು ನಂಬುತ್ತಾರೆ. ಖರ್ಗೆ ಅವರೇ ನೀವು ಮೋದಿ ಅವರಿಗೆ ಎಷ್ಟು ಬೈಯುತ್ತಿರಿ ಬೈಯ್ತಾಯಿರಿ. ನೀವು ಬೈಯ್ದಷ್ಟು ಕಮಲ ಅರಳಲಿದೆ” ಎಂದು ಶಾ ಹೇಳಿದ್ರು.





