ರಾಯಬಾಗ:~* ತಾಲ್ಲೂಕಿನ ಅಲಖನೂರ ಗ್ರಾಮದ ಉತ್ತರ ಭಾಗದಲ್ಲಿ ಬರುವ ಪಾವಿನತೋಟ ಭಾಗದ ಸವದತ್ತಿ ತೋಟದ ಶ್ರೀ ರೇಣುಕಾದೇವಿ ದೇವಸ್ಥಾನದ ತೋಟ ಪಟ್ಟಿ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ತೊಂದರೆ ಎದುರಾಗಿದೆ. ಪರಿಶುದ್ಧ ಕುಡಿಯುವ ನೀರು 【ಫಿಲ್ಟರ್ ವಾಟರ್ 】 ತರಬೇಕಾದರೆ 3 ಕಿ.ಮಿ.ದೂರದ ಸುಟ್ಟಟ್ಟಿ ಕ್ರಾಸ್ ಅಥವಾ ಪರಮಾನಂದವಾಡಿಗೆ ಹೋಗಬೇಕಾದ ದುಸ್ಥಿತಿ ಇಲ್ಲಿನ ನೂರಾರು ನಿವಾಸಿಗಳದ್ದಾಗಿದೆ. ಮೂಲ ಸೌಕರ್ಯ ಇಲ್ಲದೇ ಇಲ್ಲಿನ ನಿವಾಸಿಗಳು ಕೊಳವೆ ಭಾವಿ ಹಾಗೂ ತೆರೆದ ಭಾವಿಯ ನೀರನ್ನೇ ಕುಡಿಯುತ್ತಿದ್ದಾರೆ. ಆದುದರಿಂದ ಕುಡಚಿ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಮಾನ್ಯ ಶ್ರೀ ಮಹೇಂದ್ರ ತಮ್ಮಣ್ಣವರ ಅವರು ತುರ್ತಾಗಿ ಇಲ್ಲಿನ ಶ್ರೀ ರೇಣುಕಾದೇವಿ ದೇವಸ್ಥಾನದ ಸಮೀಪ ಶುದ್ಧ ಕುಡಿಯುವ ನೀರಿನ ಘಟಕ 【 ಫಿಲ್ಟರ್ ವಾಟರ್】 ಮಂಜೂರಿಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ರೇಣುಕಾದೇವಿ ದೇವಸ್ಥಾನದ ಸದ್ಭಕ್ತರಾದ ಶ್ರೀ ಸಂಜು ಬುರ್ಲಿ,ಲಕ್ಷ್ಮಣ ಹಕ್ಕಿ,ಇಟ್ಟಪ್ಪ ಸವದತ್ತಿ, ಮಲ್ಲಪ್ಪ ಸವದತ್ತಿ,ಬಸಪ್ಪ ಗುಳೇದಾರ,ಸಿದ್ದಪ್ಪ ಗುಳೇದಾರ,ಅಣ್ಣಪ್ಪ ಚಂಡಕೆ,ಲಕ್ಕಪ್ಪ ಕರಿಗಾರ, ಚಿದಾನಂದ ಕರಿಗಾರ ವಿಠ್ಠಲ ಹೆಗಡೆ,ಹಾಗೂ ಬಸಪ್ಪ ಅಲಗೂರ ಆಗ್ರಹಿಸಿದ್ದಾರೆ.
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*




