ಗಂಗಾವತಿ:ಗಂಗಾವತಿ, ಕನಕಗಿರಿ, ಕಾರಟಗಿ,ಕಂಪ್ಲಿ , ತಾಲುಕುಗಳು ಮತ್ತು ತಾವರಗೇರಾ ಪಟ್ಟಣವನ್ನು ಸೇರಿಸಿ,ಗಂಗಾವತಿ ನಗರವನ್ನು ಕೇಂದ್ರವಾಗಿಸಿಕೊಂಡು ಕಿಷ್ಕಿಂದಾ ಜಿಲ್ಲಾ ರಚನೆ ಮಾಡಬೇಕೆಂದು ಗಂಗಾವತಿಯ ನಿಯೋಗ ಒಂದರ ಮೂಲಕ ಜಿಲ್ಲಾ ಉಸ್ತುವಾರಿ ಮತ್ತು ಹಿಂದುಳಿದ ವರ್ಗ,ಕನ್ನಡ ಹಾಗೂ ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿಯವರಿಗೆ ಮನವಿ ಸಲ್ಲಿಸಲಾಗಿದೆ.
ತುರ್ತು ಮತ್ತು ತೀವ್ರವಾಗಿ ಮನವಿ ಸಲ್ಲಿಸಬೇಕಾಗಿದ ಸನ್ನಿವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲಾಗಲಿಲ್ಲ.ಅದಕ್ಕಾಗಿ ಕೆಲವರು ಮಾತ್ರ ಈ ನಿಯೋಗದಲ್ಲಿ ಪಾಲ್ಗೊಳ್ಳಬೇಕಾಯ್ತು ಎಂದು ನಿಯೋಗದ ಸದಸ್ಯರು ತಿಳಿಸಿದ್ದಾರೆ.
ನಿಯೋಗದಲ್ಲಿದ್ದ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಕಾಂಗ್ರೇಸ್ ಪಕ್ಷದ ನಾಯಕಿ ಶ್ರೀಮತಿ ಶೈಲಜಾ ಹಿರೇಮಠ, ಡಾ.ಶಿವಕುಮಾರ ಮಾಲಿಪಾಟೀಲ್, ಪತ್ರಕರ್ತರಾದ ಮಂಜುನಾಥ ಗುಡ್ಲಾನೂರ್, ಹರನಾಯಕ, ವೀರೇಶ ಅಂಗಡಿ ಬೆಣಕಲ್,ಪ್ರಹ್ಲಾದ್ ಕುಲಕರ್ಣಿ, ವಿಜಯ ಬಳ್ಳಾರಿ,ದೃಶ್ಯ ಮಾಧ್ಯಮದ ಪ್ರತಿನಿಧಿ ಮಲ್ಲಿಕಾರ್ಜುನ ಇವರುಗಳು ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂಧರ್ಭದಲ್ಲಿ ಹೇರೂರ ಶಶಿಧರಗೌಡ ಮಾಲಿ ಪಾಟೀಲ್, ಕನಕಗಿರಿ ಗಂಗಾಧರ ಕಲ್ಭಾಗಿಲ ಮಠ ಹಾಗೂ ಮುಂತಾದವರಿದ್ದರು.




