ಕೋಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಲು ಆಗ್ರಹ

Share the Post Now

ಬೆಳಗಾವಿ

ಅಥಣಿ: ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಮತ್ತು ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನದಲ್ಲಿ ಇದ್ದು ಸರಕಾರಿ ಪ್ರೌಢಶಾಲೆ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ
ಕೆಟ್ಟು ಹಲವಾರು ದಿನಗಳು ಕಳೆದರೂ ದುರಸ್ತಿ ಕೈಗೊಳ್ಳದ್ದರಿಂದ ಕೋಹಳ್ಳಿಯ ಗ್ರಾಮಸ್ಥರು ಕುಡಿಯುವ ನೀರಿಗೆ ಅಲೆದಾಡುವಂತಾಗಿದೆ.
ಅರ್ಧ ಕಿಲೋಮೀಟರ್ ತೆರಳಿ ನೀರು ತರುವಂತಾಗಿದ್ದು.

ಅಧಿಕಾರಿಗಳು ಕುಡಿಯುವ ನೀರಿನ ಘಟಕ ದುರಸ್ತಿ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಮಹಾದೇವ ಮೈಸಾಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರ್ಮಾಣಗೊಂಡು ಕೆಲವು ದಿನಗಳ ಹಿಂದೆ ಶುದ್ಧ ನೀರಿನ ಘಟಕ ಕಾರ್ಯನಿರ್ವಹಿಸಿತ್ತು ಸದ್ಯ ಒಂದೂವರೆ ವರ್ಷದಿಂದಲ್ಲೆ ಸ್ತಿಗಿತಗೊಂಡಿದೆ ಹಾಗಾದರೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದರು


ಈಗಾಗಲೇ ಚಳಿ ಆರಂಭದಲ್ಲಿ ಇದ್ದು ಕೆಲವು ತಿಂಗಳು ಕಳೆದರೆ ಬೇಸಿಗೆ ದಿನಗಳು ಸಮೀಪಿಸುತ್ತಿದ್ದಂತೆ ಹೆಚ್ಚು ಅನುಕೂಲಕರವಾಗಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳು ಉಪಯೋಗ ವಿಲ್ಲದಂತಾಗಿದೆ ಈ ಘಟಕ ಕೆಲವು ದಿನಗಳು ಕಳೆದರು ದುರಸ್ತಿ ಕೈಗೊಂಡಿಲ್ಲ ಎಂದು ಇಲ್ಲಿಯ ಸ್ಥಳೀಯರು ಹೇಳ್ತಾ ಇದ್ದಾರೆ.

ಈ ಘಟಕದಲ್ಲಿ ನೀರು ಸಂಗ್ರಹಣ ಟ್ಯಾಂಕ್ ಮತ್ತು ಇತರ ಶುದ್ಧಿಕರಣ ಉಪಕರಣಗಳು ಸಹಿತ ಲಕ್ಷಾಂತರ ರೂಪಾಯಿ ವೆಚ್ಚದ ಸಲಕರಣೆಗಳನ್ನು ಘಟಕದಲ್ಲಿ ಅಳವಡಿಸಲಾಗಿದ್ದು ಅವುಗಳೆಲ್ಲವೂ ಕಾರ್ಯಾರಂಭಗೊಳ್ಳದೆ ನಿಷ್ಪ್ರಯೋಜಕವಾಗಿದ್ದು ತುಕ್ಕು ಹಿಡಿಯಲಾರಂಭಿಸುವೆ.

ಈಗಲಾದರೂ ಎಚ್ಚತ್ತು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಶುದ್ಧ ನೀರಿನ ಘಟಕ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಾರೋ ಇಲ್ಲೊ ಕಾದು ನೋಡಬೇಕು.

ಈ ಸಂದರ್ಭದಲ್ಲಿ ರಮೇಶ ಮೆಂಡಿಗೇರಿ ಆಕಾಶ ಕನ್ನಾಳ ರೋಹನ ತಳಕೇರಿ ಅನಾರಕಲಿ ಕೊರಬು ಬಸವ್ವಾ ತಳಕೇರಿ ಚಂದ್ರಕಾಂತ ಕನ್ನಾಳ ಇನ್ನು ಕೆಲವರು ಉಪಸ್ಥಿತರಿದ್ದರು

ವರದಿ :ಶಶಿಕಾಂತ್ ಪುಂಡಿಪಲ್ಲೇ

Leave a Comment

Your email address will not be published. Required fields are marked *

error: Content is protected !!