ಬೆಳಗಾವಿ
🖊️ಸಚಿನ್ ಕಾಂಬ್ಳೆ
ಅಥಣಿ:ಪದೇ ಪದೇ ದರೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದದ ವತಿಯಿಂದ* ಸೋಮವಾರ ದಿನಾಂಕ -27/03/2023 ರಂದು ದರೂರ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಗ್ರಾಮಸ್ಥರೆಲ್ಲರೂ ದರೂರ ಗ್ರಾಮ ಪಂಚಾಯಿತಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ನಿರ್ಧರಿಸಲಾಗಿದೆ ಎಂದು ಡಿಎಸ್ಎಸ್ ಭೀಮವಾದ ರಾಜ್ಯ ಸಂಘಟನಾ ಸಂಚಾಲಕರರಾದ ಸಂಜೀವ ಕಾಂಬಳೆ ಹೇಳಿದರು.
ಅವರು ಶನಿವಾರ ದಿ.೨೫ ರಂದು ದರೂರದಲ್ಲಿ ಮಾತನಾಡಿದ ಅವರು ಅಥಣಿ ತಾಲ್ಲೂಕಾ ಪಂಚಾಯಿತಿಯ ಕಾರ್ಯನಿರ್ವಾಹಣಾಧಿಕಾರಿಗಳು ಕಳೆದ ಎರಡು ವರ್ಷಗಳ ಆಡಳಿತಾವಧಿಯಲ್ಲಿ 5 ಜನ ಅಭಿವೃದ್ಧಿ ಅದಿಕಾರಿಗಳನ್ನ ಬದಲಾವಣೆ ಮಾಡುತ್ತಾ ಬಂದಿರುತ್ತಾರೆ ಹೀಗಿರುವಾಗ ಗ್ರಾಮದ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ. ಇತ್ತೀಚೆಗೆ ಆಗಮಿಸಿದ 6ನೇ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಉಮೇಶ್ ಪೋಳ ಇವರು ಬಂದು ಗ್ರಾಮದ ಸ್ವಚ್ಚತೆಯ ಬಗ್ಗೆ, ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಗ್ರಾಮದ ಎಲ್ಲಾ ಜನರು ಪಿಡಿಓ ಅವರ ಮಾಡುತ್ತಿರುವ ಒಳ್ಳೆಯ ಕೆಲಸಕ್ಕೆ ಶ್ಲಾಘನೀಯ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಗ್ರಾಮ ಈಗ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಕಾಣುತ್ತಿದೆ ಎಂದು ನಿಟ್ಟುಸಿರು ಬಿಡುವಂತಾಗಿದೆ. ಆದರೆ ತಾಲ್ಲೂಕ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಯಾರದೋ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಗ್ರಾಮ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪಿಡಿಓ ಅವರನ್ನು ವರ್ಗಾವಣೆ ಮಾಡಲು ಆದೇಶಿಸಿದ್ದಾರೆ. ಇದನ್ನು ಖಂಡಿಸಿ ದರೂರ ಗ್ರಾಮ ಪಂಚಾಯಿತಿ ಬೀಗ ಹಾಕಿ ಗ್ರಾಮ ಪಂಚಾಯಿತಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ನಿರ್ಧರಿಸಲಾಗಿದೆ ಎಂದರು.
ಉಮೇಶ್ ಪೋಳ ಅವರು ಯಾವ ತಪ್ಪು ಮಾಡಿದ್ದಾರೆ ಯಾವ ಹಗರಣ ಮಾಡಿದ್ದಾರೆ ಎಂಬುದನ್ನು ತಾಲ್ಲೂಕ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳಬೇಕು. ತಕ್ಷಣ ಆದೇಶವನ್ನು ಹಿಂಪಡೆದು ಕೆಲಸ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.