ಬೆಳಗಾವಿ. ಅಥಣಿ
ವರದಿ: ಶಶಿಕಾಂತ ಪುಂಡಿಪಲ್ಲೆ
ಅಥಣಿ : ಈ ಹಿಂದೆ ಅಥಣಿ ಮತಕ್ಷೇತ್ರದ ಶಾಸಕರಾಗಿದ್ದ ವೇಳೆ ನಾನು ಮಾಡಿದ ಅಭಿವೃದ್ದಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಿವೆ, ಬಿಜೆಪಿ ಪಕ್ಷದಲ್ಲಿ ಪ್ರಮಾಣಿಕರಿಗೆ ಬೆಲೆಯಿಲ್ಲ, ಟಿಕೇಟ್ ಕೊಡುತ್ತೆನೆ ಎಂದು ದ್ರೋಹ ಬಗೆದಿದ್ದಕ್ಕೆ ನಾನು ಬಿಜೆಪಿ ಬಿಟ್ಟು ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡೆ ಎಂದು ಕಾಂಗ್ರೇಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಅವರು ಹೇಳಿದರು.
ಅವರು ಅಥಣಿ ಗ್ರಾಮೀಣ ಭಾಗದ ಬಡಕಂಬಿ ತೋಟದ ವಾರ್ಡಿನಲ್ಲಿ ಪ್ರಚಾರ ಮಾಡುತ್ತಾ ಮಾತನಾಡಿ ಈ ಭಾಗದ ಜನರು ಮೊದಲಿನಿಂದಲೂ ನನಗೆ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ, ಈ ಸಲ ನನ್ನ ಚಿನ್ಹೆ ಬದಲಾಗಿದೆ ಹೊರತು ವ್ಯಕ್ತಿಯಲ್ಲ, ನಾನು ಯಾವತ್ತೂ ಜನಪರವಾದ ಕೆಲಸ ಮಾಡುವ ವ್ಯಕ್ತಿ, ಬರುವ ಚುನಾವಣೆಯಲ್ಲಿ ತಾವು ತಪ್ಪದೆ ಕಾಂಗ್ರೇಸ್ ಪಕ್ಷಕ್ಕೆ ಮತಹಾಕಿ ಎಂದರು.
ಅನಂತರ ಮುಖಂಡರಾದ ಬಸವರಾಜ ಬುಟಾಳಿ, ಶಿವಾನಂದ ದಿವಾನಮಳ ಅವರು ಮಾತನಾಡಿದರು. ಈ ವೇಳೆ ಸಿದ್ದಾರ್ಥ ಸಿಂಗೆ, ರಮೇಶ ಸಿಂದಗಿ, ಅನೀಲ ಸುಣಧೋಳಿ, ವಿನಾಯಕ ದೇಸಾಯಿ, ಸುಶೀಲಕುಮಾರ ಪತ್ತಾರ, ರವಿ ಬಡಕಂಬಿ, ಶ್ರೀಶೈಲ ನಾಯಿಕ, ಪಿಂಟು ಚಮಕೇರಿ, ರಮೇಶ ಕಾಗಲೆ, ಮುರಗೆಪ್ಪಾ ಬಡಕಂಬಿ, ಭೈರು ಬಿಳ್ಳೂರ, ಕೇದಾರಿ ಐಗಳಿ, ಸತ್ಯಪ್ಪಾ ಚಮಕೇರಿ, ತಮ್ಮಣ್ಣ ಖಲಾಟೆ, ಮಾರುತಿ ಐಗಳಿ, ಹಣಮಂತ ಭಜಂತ್ರಿ, ಸದಾಶಿವ ರಬಕವಿ, ಮಾದೇವ ಬಡಕಂಬಿ, ಸಿದ್ದು ಬಿಳ್ಳೂರ, ಜ್ಯೋತಿ ಬಡಕಂಬಿ, ರಾಮು ಬಡಕಂಬಿ ವಿಘ್ನೇಶ್ವರ ಯುವಕ ಸಂಘದ ಸದಸ್ಯರು ಸೇರಿದಂತೆ ಇತರರಿದ್ದರು.