ಬೆಳಗಾವಿ. ಅಥಣಿ
ವರದಿ – ಸಿದ್ದಾರೂಢ ಬಣ್ಣದ
ರಡ್ಡೆರಹಟ್ಟಿ – ವಿಶ್ವವಿಖ್ಯಾತ ಶ್ರೀ ಜೈನ ಕ್ಷೇತ್ರ ಶ್ರವಣ ಬೆಳಗೊಳದ ಜೈನ ಮಠದ ಪೀಠಾಧಿಪತಿಗಳು ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಗುರುವಾರ 23-3-2023 ರಂದು ಇಹಲೋಕ ತ್ಯಜಿಸಿದರೆಂದು ತಿಳಿಸಲು ವಿಷಾದಿಸುತ್ತೇವೆ. ಇವರ ಈ ಆಕಸ್ಮಿಕ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.ಶ್ರೀ ಚಾರುಕೀರ್ತಿ ಸ್ವಾಮಿಗಳು “ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ದಿ ಎಂಬ ಶ್ರೀ ಬಾಹುಬಲಿ ಸಂದೇಶವನ್ನು ಜಗತ್ತಿಗೆ ತಿಳಿಸಿದ ಮಹಾನುಭಾವರು ಅವರ ದಿವ್ಯ ಆತ್ಮಕ್ಕೆ ಭಕ್ತಿಪೂರ್ವಕ ವಿನಯಾಂಜಲಿಯನ್ನು ರಡ್ಡೆರಹಟ್ಟಿಯ ಗ್ರಾಮಸ್ಥರು ಆಚರಿಸಿದರು.
ಇವರು ಜೈನ ಧರ್ಮದವರಗಿದ್ದರು ಇವರ ಭಕ್ತಿಪೂರ್ವಕ ವಿನಯಾಂಜಲಿಯನ್ನು ಸಲ್ಲಿಸಲಿ ಗ್ರಾಮದ ಎಲ್ಲ ಸಮುದಾಯದ ಜನರು ಭಾಗಿಯಾಗಿದ್ದರು ವಿಶೇಷವಾಗಿ ಕ್ಯಾಂಡಲ್ ಹಚ್ಚುವುದರ ಮೂಲಕ ಶ್ರೀ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೇಳಿಕೊಂಡರು
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಪಾರಿಸ ದಾದಪ್ಪಾಗೋಳ, ನೇಮಣ್ಣ ದಾದಪ್ಪಾಗೋಳ, ಬಾಹುಬಲಿ ದಾದಪ್ಪಾಗೋಳ, ಸಚಿನ ನಾಯಿಕ, ದುರಂದರ್ ಬೋಸಲೇ, ಸಂಗಮೇಶ ಖೋತ, ಬಾಬು ಹುಳ್ಯಾಳ್, ಅಣ್ಣಪ್ಪ ಕಿತ್ತೂರ, ಲಕ್ಕಪ್ಪ ನಾಯಿಕ ಹಾಗೂ ಗ್ರಾಮದ ಎಲ್ಲ ಹಿರಿಯರು ಯುವಕರು ಕೂಡಾ ಭಾಗಿಯಾಗಿದ್ದರು..