ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಬಿಜೆಪಿಯಿಂದ ಧನಂಜಯ ಜಾಧವ ಸೂಕ್ತ ಅಭ್ಯರ್ಥಿ.

Share the Post Now

ಮಾಜಿ ಸಚಿವ ಈಶ್ವರಪ್ಪ ಹೇಳಿಕೆ..

ಬೆಳಗಾವಿ* ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ವಿಜಯ ನಗರ, ಹಿಂಡಲಗಾ ಕಾರ್ಯಾಲಯಕ್ಕೆ ಬಿಜೆಪಿ ಮಾಜಿ ಪಂಚಾಯತ ರಾಜ ಮಂತ್ರಿಯಾದ ಕೆ.ಎಸ್. ಈಶ್ವರಪ್ಪಾ ಇವರು ಭೇಟಿ ಕೊಟ್ಟರು. ಇವರನ್ನು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷರು ಧನಂಜಯ ಜಾಧವ ಅವರು ಸತ್ಕರಿಸಿದರು.

ಈ ಸಮಯದಲ್ಲಿ ಉಪಸ್ಥಿತರಿದ್ದ ಬಿಜೆಪಿ ಎಲ್ಲ ಕಾರ್ಯಕರ್ತರನ್ನು ಉದ್ದೆಶಿಸಿ ಮಾತನಾಡುತ್ತಾ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಕಾರ್ಯಾಲಯವು ಕಾರ್ಯಕರ್ತರ ನಿಷ್ಠೆ ಹಾಗೂ ಪ್ರಾಮಾಣಿಕತೆಯ ಪ್ರವೃತಿಯಿಂದ ನಡೆಯುತ್ತದೆ ಎಂದು ಕೇಳಿ ಆನಂದವಾಯಿತು ಎಂದರು…

ಇದರಲ್ಲಿ ಧನಂಜಯ ಜಾಧವ ಇವರಿಂದ ಸಂಘಟನೆಯನ್ನು ಹೇಗೆ ಮಾಡಬೇಕೆಂದು ತಿಳಿಯುತ್ತದೆ, ನಾನು ಕೂಡಾ ಹೀಗೆಯೇ ಸಂಘಟಣೆಯ ಮೂಲಕ ಬಂದ ವ್ಯಕ್ತಿ ಎಂದು ಸಂತಸ ವ್ಯಕ್ತಪಡಿಸಿದರು..

ಬರುವ ಚುಣಾವಣೆಯಲ್ಲಿ ಧನಂಜಯ ಅವರನ್ನು ಬಿಜೆಪಿಯ ಅಭ್ಯರ್ಥಿಯನ್ನಾಗಿ ಮಾಡಿದರೆ, ಈ ಗ್ರಾಮೀಣ ಕ್ಷೇತ್ರವು ಬಿಜೆಪಿಯದಾಗುತ್ತದೆ ಎಂದು ಹೇಳಿದರು..

ಈ ಸಮಯದಲ್ಲಿ ಬಿಜೆಪಿಯ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ ರವಿ ಬಿ ಕಾಂಬಳೆ ಬೆಳಗಾವಿ

Leave a Comment

Your email address will not be published. Required fields are marked *

error: Content is protected !!