ಬೆಳಗಾವಿ
ಪರಮಾನಂದವಾಡಿ: ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಹಾರೂಗೇರಿ ಮತ್ತು ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ಪರಮಾನಂದವಾಡಿ ವಲಯ ಇವರ ಸಯುಕ್ತ ಆಶ್ರಯದಲ್ಲಿ ಪೂಜ್ಯ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೋಶ್ರೀ ಹೇಮಾವತಿ ಹೆಗ್ಗಡೆ ಅವರ ಆಶೀರ್ವಾದಗಳೊಂದಿಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ.
ಗ್ರಾಮಗಳಲ್ಲಿ ಸುಸ್ಥಿರ ಪ್ರಗತಿಯ ಅನೇಕ ಮಾದರಿಯ ಯೋಜನೆಗಳನ್ನು ಪ್ರಾರಂಭಿಸಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರ ಸಾಮರ್ಥ್ಯವರ್ಧನೆಗೆಂದು 1982 ರಲ್ಲಿ ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ದೇಶದ ಪ್ರಮುಖ ಸ್ವಯಂಸೇವಾ ಸಂಸ್ಥೆಗಳಲ್ಲೊಂದಾಗಿದೆ. ಸರಿ ಸುಮಾರು 40 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಸ್ವಾವಲಂಬನೆ ಆರ್ಥಿಕ ಸಾಮರ್ಥ್ಯ, ಕೌಶಲ್ಯಾಭಿವೃದ್ಧಿಯನ್ನು ಸಬಲೀಕರಣದ ವ್ಯಾಖ್ಯೆಯಲ್ಲಿ ಯೋಜನೆಯು ಸೇರಿಕೊಂಡಿದೆ ಎಂದು ಹಾರೂಗೇರಿ ವಲಯದ ಯೋಜನಾಧಿಕಾರಿಗಳು ಆದ ಕಿರಣ್ .ಎಸ್ ಹೇಳಿದರು.
ಯಾವುದೇ ಸಂದರ್ಭದಲ್ಲಿಯೂ ತನ್ನ ಪಾಲುದಾರ ಕುಟುಂಬಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಬ್ಯಾಂಕುಗಳ, ವಿಮಾ ಕಂಪನಿಗಳು, ಸರ್ಕಾರದ ಪ್ರಗತಿ ನಿಧಿಯಾಗಿ ಬಡ ಜನರಿಗೆ ಯಾವುದೇ ಕಿರಿಕಿರಿಯಾಗದೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಯಶಸ್ವಿಯಾಗಿದೆ. ಇದರೊಂದಿಗೆ ಸ್ವ-ಸಾಯ ಸಂಘ ರಚನೆ, ಪ್ರಗತಿನಿಧಿ ವಿತರಣೆ, ಸಿಡಿಬಿ ಸಾಲ ವಿತರಣೆ, ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ), ಜ್ಞಾನವಿಕಾಸ ಕಾರ್ಯಕ್ರಮ, ವಾತ್ಸಲ್ಯ ಕಾರ್ಯಕ್ರಮ, ಹಸಿರು ಇಂಧನ, ಜನಜಾಗೃತಿ ಕಾರ್ಯಕ್ರಮ, ಧಾರವಾಡದಲ್ಲಿ ಸಿರಿಧಾನ್ಯ ಮೌಲ್ಯವರ್ಧನಾ ಕೇಂದ್ರ, ರೈತ ಯಂತ್ರೋಪಕರಣಗಳ ಬಾಡಿಗೆ ಕೇಂದ್ರಗಳ ಸ್ಥಾಪನೆ, ವಿಮಾ ಕಾರ್ಯಕ್ರಮ, ಸಂಪೂರ್ಣ ಸುರಕ್ಷಾ, ಪ್ರಗತಿ ರಕ್ಷಾ ಕವಚ ವಿಮಾ ಕಾರ್ಯಕ್ರಮ, ಆರೋಗ್ಯ ರಕ್ಷಾ ವಿಮಾ ಕಾರ್ಯಕ್ರಮ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಜಗ ಮಂಗಳ ಕಾರ್ಯಕ್ರಮ, ಮಾಶಾಸನ, ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮಗಳು ಸೇರಿದಂತೆ ಇನ್ನೂ ಮುಂತಾದ ನೂರಾರು ಕಾರ್ಯಕ್ರಮಗಳು ಪೂಜ್ಯರು ಹಮ್ಮಿಕೊಂಡಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳಿಗೆ ದೇಶವಿದೇಶಗಳಿಂದ ಸಾಕಷ್ಟು ಪ್ರಶಸ್ತಿಗಳು ಸಂದಿವೆ ಎಂದು ಆಗಮಿಸಿದ ಸಂಘದ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ಧರ್ಮಸ್ಥಳದ ಯೋಜನೆಗಳ ಬಗ್ಗೆ ಸ್ವ-ವಿಸ್ತಾರವಾಗಿ ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಶ್ರೀ ಸದ್ಗುರು ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಆಗಮಿಸಿದ ಸಂಘದ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಶ್ರೀ ಲಕ್ಷ್ಮೀದೇವಿ ಪಂಚ ಕಮಿಟಿಯ ಅಧ್ಯಕ್ಷರಾದ ದರೇಪ್ಪ ಗಂಡೋಶಿ ವಹಿಸಿದ್ದರು.
ಅತಿಥಿಗಳಾಗಿ ಅಸಪಲ್ಲಿ ಮುಲ್ಲಾ. ಸಾತ್ತಪ್ಪ ಅಂಬಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಿಲಾರೆ ಉಪಾಧ್ಯಕ್ಷ ಮಹಾವೀರ ಚಂಡಕೆ ಮುಖಂಡರಾದ ದಶರತ ಕಂಠಿಕಾರ, ಸಿದ್ದಾರೂಡ ಕೌಲಗುಡ್ಡ, ಶಿಲಾದರ ಗೌಡರ, ದಿಲೀಪ ಗಂಡೋಶಿ, ಪಿ.ಎಸ್.ಮಿರ್ಜೆ, ರಫೀಕ ಜಮಾದಾರ, ಸುಭಾಷ ವಾಳಕೆ, ಮುಸ್ತಾಕ ಸೈಯದ, ಬಸಗೌಡ ಡವಳೆ ಸೇರಿದಂತೆ ಇನ್ನೂ ಮುಂತಾದ ಗ್ರಾಮ ಪಂಚಾಯತ ಸದಸ್ಯರು ಮತ್ತು ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ನಿರೂಪಣೆ ಮತ್ತು ವಂದನಾರ್ಪಣೆಯನ್ನು ಮೇಲ್ವಿಚಾರಕ ಗುರುನಾಥ ಉಳ್ಳಾಗಡ್ಡಿ ಮತ್ತು ಸ್ವಾಗತವನ್ನು ಶಿವಾನಂದ ಯಲ್ಲಟ್ಟಿ ನೆರವೇರಿಸಿದರು
ವರದಿ :ಶ್ರೀನಾಥ್ ಶಿರಗುಕರ್