ಹಳ್ಳೂರ.
ಧರ್ಮಸ್ಥಳ ಗ್ರಾಮಭಿವೃದ್ಧಿ ಗ್ರಾಮೀಣಾಭಿವೃದ್ಧಿ ಜ್ಞಾನ ವಿಕಾಸ ಯೋಜನೆಯಲ್ಲಿ ನಮ್ಮ ಶಾಲೆಗೆ ಒಬ್ಬ ಇಂಗ್ಲಿಷ್ ಶಿಕ್ಷಕನನ್ನು ನೀಡಿ ಟ್ಯೂಷನ್ ಕ್ಲಾಸ ನಡೆಸಿ ಇಂಗ್ಲೀಷ ವಿಷಯದ ಹಸಿವನ್ನು ನಿಗಿಸಿದ ಧರ್ಮಸ್ಥಳ ಸಂಸ್ಥೆಯ ಕಾರ್ಯ ನಿಜಕ್ಕೂ ಮೆಚ್ಚುವಂತಹದು ಎಂದು ಮುಖ್ಯೋಪಾಧ್ಯಾಯ ಶಿವಾನಂದ ಅರಗಿ ಹೇಳಿದರು.
ಶಿವಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜ್ಞಾನ ವಿಕಾಸ ಯೋಜನೆಯಡಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಆಂಗ್ಲ ಭಾಷಾ ಟೂಷನ್ ಕ್ಲಾಸ್ ನ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ವಿದ್ಯಾನಿಧಿ,ಶಿಕ್ಷಣದೀಪ,ಜ್ಞಾನವಿಕಾಸ. ಸುಜ್ಞಾನ ನಿಧಿ,ಶಾಲೆಗೆ ಬೆಂಚು ಕೊಡಿಸುವ ಯೋಜನೆ, ಸ್ವಾಸ್ಥ್ಯ ಯೋಜನೆ ಸೇರಿದಂತೆ ಬಹಳಷ್ಟು ಯೋಜನೆಗಳು ಸಂಘದ ವತಿಯಿಂದ ನೀಡಲಾಗುತ್ತಿದೆ ಅವೆಲ್ಲವನ್ನೂ ಸಾರ್ವಜನಿಕಕರು,ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಸದುಪಯೋಗ ಪಡೆದುಕೊಂಡಿದ್ದೇ ಆದರೆ ಜೀವನ ಸುಂದರವಾಗಿರುತ್ತದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಡಲಗಿ ತಾಲೂಕು ಯೋಜನಾಧಿಕಾರಿ ರಾಜು ನಾಯಕ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಕೊಡುವ ಉದ್ದೇಶದಿಂದ ಶಾಲೆಯಲ್ಲಿ ವಿದ್ಯಾರ್ಥಿಗಳು ಜಾಸ್ತಿ ಇದ್ದು ಶಿಕ್ಷಕರ ಕೊರತೆ ಇದ್ದರೆ ಸಂಘದ ವತಿಯಿಂದ ಉಚಿತವಾಗಿ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಹಾಗೂ ಪ್ರತಿವರ್ಷ ಮೂಡಲಗಿ ತಾಲ್ಲೂಕಿನಲ್ಲಿ 300 ಕ್ಕೂ ಅಧಿಕ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ,ಶಿಷ್ಯವೇತನ ಅನೇಕ ರೀತಿಯ ಸೌಲಭ್ಯಗಳನ್ನು ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ಕನ್ನಡ ರತ್ನ ರಾಜ್ಯ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ,ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಕರ ಕೊರತೆ ನೀಗಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರು ಸರಕಾರದ ಕೆಲಸಕ್ಕಿಂತ ಧರ್ಮಸ್ಥಳ ಯೋಜನೆ ಕೆಲಸ ಕಾರ್ಯಗಳು ಬೇಗನೆ ಕಾರ್ಯ ರೂಪಕ್ಕೆ ಬಂದು ಸಮಾಜವನ್ನು ಉದ್ದಾರ ಮಾಡುತ್ತಿದೆ ಎಂದರು.
ಈ ಸಮಯದಲ್ಲಿ ಕನ್ನಡ ರತ್ನ ಪ್ರಶಸ್ತಿ ಪಡೆದ ಮುರಿಗೆಪ್ಪ ಮಾಲಗಾರ ಅವರನ್ನು ಶಾಲೆಯ ಸಿಬ್ಬಂದಿಗಳು ಸನ್ಮಾನಿಸಿ ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಆರ್. ಜಿ ಬಿ ಪಾಟೀಲ.ಮೂಡಲಗಿ ತಾಲೂಕು ರೂರಲ ಮೇಲ್ವಿಚಾರಕರಾದ ರೇಣುಕಾ ತಿಳುವಳಿ.ಸೇವಾ ಪ್ರತಿನಿಧಿಗಳಾದ ಕಸ್ತೂರಿ ಸೌದಿ. ಒಕ್ಕೂಟ ಅಧ್ಯಕ್ಷೆ ಮಾದೇವಿ ಕಂಬಾಳ. ,ಶಿಕ್ಷಕರರಾದ ಸುರೇಶ ಕೊಂಗಾಲಿ.ಕೆ ಎಚ್ ಪಾಟೀಲ ಸೇರಿದಂತೆ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಣೆ ಪ್ರಭಾವತಿ ಡವಳೆಶ್ವರ.ವಂದನಾರ್ಪನೆಯನ್ನು ಶ್ರುತಿ ತುಕ್ಕನವರ ನೆರವೇರಿಸಿದರು.