ಹಳ್ಳೂರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗಡೆಯವರು ಸಮಾಜದ ಉದ್ದಾರದ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಹಣದ ರೂಪದಲ್ಲಿ ಸಹಾಯ ಸಹಕಾರ ಮಾಡುತ್ತಿದ್ದಾರೆ ಎಂದು ತಾಲೂಕಾ ಯೋಜನಾಧಿಕಾರಿ ರಾಜು ನಾಯ್ಕ ಹೇಳಿದರು.
ಅವರು ಗ್ರಾಮದ ಸೌಭಾಗ್ಯವತಿ ಸುಮಿತ್ರಾ ದೇವಿ ಪಾಟೀಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ 2 ಎರಡು ಲಕ್ಷ ರೂಪಾಯಿ ಸಹಾಯಧನ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಾಲಾ ಕಟ್ಟಡ, ಕಂಪೌಂಡ, ನಿರ್ಮಾಣ, ಶಿಕ್ಷಕರಿಗೆ ಸಹಾಯ ದನ, ಟ್ಯೂಷಣ ಕಲಿಕೆಗೆ, ಪ್ರೋತ್ಸಾಹ ಧನ, ಪರಿಸರ ಸಂರಕ್ಷಣೆ ಸ್ವಾಸ್ತ್ಯ ಕಾರ್ಯಕ್ರಮ,ವಿದ್ಯಾರ್ಥಿಗಳು ದುಷ್ಟ ಚಟಗಳಿಗೆ ಬಲಿಯಾಗಬಾರದೆಂದು ಜಾಗೃತಿ ಅಭಿಯಾನ, ಆಟದ ಮೈದಾನ ಶೌಚಾಲಯ ನಿರ್ಮಾಣ ,ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ,ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನೇಕ ಬಗೆಯ ಸೌಲಭ್ಯಗಳು ಸಿಗುತ್ತವೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷರಾದ ಮಾರುತಿ ದಾಸರ ಮಾತನಾಡಿ ದೇವಸ್ಥಾನಗಳಿಗೆ ಹೋಗಿ ನಾವು ಹಣದ ರೂಪದಲ್ಲಿ ಕಾಣಿಕೆ ನೀಡುತ್ತೇವೆ ಆದರೆ ನಮ್ಮ ಶಾಲೆಯ ಕಟ್ಟಡ ಕಾಮಗಾರಿಗೆ ಪುಣ್ಯಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಣ ಕೊಟ್ಟಿದ್ದಕ್ಕೆ ನಮ್ಮ ಸೌಭಾಗ್ಯ ಎಂದು ಹೇಳಿದರು.
ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬಡ ಕುಟುಂಬ ಶಾಲಾ ಕಾಲೇಜು ಕಟ್ಟಡ ಕಾಮಗಾರಿಗೆ ಹಣದ ರೂಪದಲ್ಲಿ ಸಹಾಯ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಥಳ ಸಂಸ್ಥೆ ಸಹಾಯ ಮಾಡುವ ಪುಣ್ಯದ ಕೆಲಸ ಉಳಿದಿಲ್ಲ ಎಂದು ಹೇಳಿದರು. ಭುದಾನಿಗಳಾದ ಭೀಮನಗೌಡ ಪಾಟೀಲ. ಪ್ರಧಾನ ಗುರುಗಳಾದ ಜಿ ಜಿ ಇಡನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಸಂತಾಪ ಸೂಚಿಸಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ಸಮಯದಲ್ಲಿ ಮೇಲ್ವಿಚಾರಕಿ ರೇಣುಕಾ ತಿಳುವಳಿ. ಒಕ್ಕೂಟ ಅಧ್ಯಕ್ಷೆ ಕೌಸರ ಹನಗಂಡಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯರಾದ ಎಂ ಡಿ ಕಂಬಾರ. ಪಿ ಎಂ ಶಿವಾಪುರ. ಎ ಎಂ ಹೆಗ್ಗಾಣಿ. ಎಂ ಎಂ ನೇಸುರ. ಜಯಶ್ರೀ ಹೊಸಟ್ಟಿ. ಎಂ ಆರ್ ಬಂಡಿ. ಎಂ ಬಿ ಹುಕ್ಕೇರಿ. ಆರ್ ಎಲ್ ಹರಿಜನ. ಕೆ ಕೆ ಗುಳೇದ. ಎಂ ಡಿ ಮೇತ್ರಿ ಸೇರಿದಂತೆ ಶಿಕ್ಷಕರು ,ವಿದ್ಯಾರ್ಥಿಗಳಿದ್ದರು.