ಹಳ್ಳೂರ
.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಷೇತ್ರದ ಹಳ್ಳೂರ ಡಿಜಿಟಲ್ ಸೇವಾ ಕಛೇರಿಯಲ್ಲಿ ಬೇಧ ಭಾವ ಮಾಡದೆ ಸಾಮೂಹಿಕವಾಗಿ ಸಹೋದರ,ಸಹೋದರಿಯರಂತೆ ಪ್ರೀತಿ ವಾತ್ಸಲ್ಯ ತೋರಿ ಸನಾತನ ಕಾಲದ ಪದ್ಧತಿ ಪ್ರಕಾರ ಕೈಯಲ್ಲಿ ರಾಕಿ ಕಟ್ಟಿ ಆರತಿ ಬೆಳಗಿ ರಕ್ಷಾ ಬಂಧನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಮಯದಲ್ಲಿ ವಲಯದ ಮೇಲ್ವಿಚಾರಕಿ ರೇಣುಕಾ ಟಿ. ಒಕ್ಕೂಟದ ಅಧ್ಯಕ್ಷೆ ಕೌಸರ ಹಣಗಂಡಿ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ. ಸಿ ಎಸ್ ಸಿ ಸೇವಾದಾರ ಮಣಿಕಂಠ ಮಾಲಗಾರ.ಸೇವಾ ಪ್ರತಿನಿಧಿ ಮಾಲಾ ಮೇತ್ರಿ. ತಸ್ಲೀಮ ಹಣಗಂಡಿ. ಇಸಾಕ ಮುಜಾವರ. ಲಕ್ಷ್ಮೀ ಮದರಖಂಡಿ. ಪೂಜಾ ಜಿರಲಿ ಸೇರಿದಂತೆ ಅನೇಕರಿದ್ದರು.