ಸೋದರನ ವಾತ್ಸಲ್ಯಕ್ಕಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ರಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ?

Share the Post Now

ಪ್ರಚಾರದ ಪೋಸ್ಟರನಿಂದಾ ಪಕ್ಷಕ್ಕೆ ಮುಜುಗರ ಆಗುವದೇ?

ಬೆಳಗಾವಿ : ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ “ಗೃಹಲಕ್ಷ್ಮಿ ಯೋಜನೆ”ಯ ಚಾಲನೆಗಾಗಿ, ಹಲವಾರು ಸಲ ದಿನಾಂಕ ಬದಲಾದರೂ ಕೂಡಾ ಕೊನೆಗೆ ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಚಾಲನೆ ಸಿಗುವ ನಿಟ್ಟಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ..

ರಾಜ್ಯ ಸರ್ಕಾರದ ಈ ಯೋಜನೆಯ ಬಗ್ಗೆ ಎಲ್ಲರಿಗೆ ಗೌರವವಿದ್ದು, ಬಹುಪಾಲು ಮಹಿಳೆಯರು ಇದರ ಲಾಭ ತಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಬಡವರ ಪರವಾದ ಇಂತಹ ಕಾಳಜಿಗೆ ಎಲ್ಲರೂ ಮೆಚ್ಚುವಂತಾಗಿದೆ..

ಆದರೆ ಗ್ರಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಸ್ವಂತ ಜಿಲ್ಲೆ ಬೆಳಗಾವಿಯ ಕೆಲ ಭಾಗಗಳಲ್ಲಿ ಹೊರಡಿಸಿರುವ ಬಿತ್ತಿ ಚಿತ್ರಗಳ (ಪೋಸ್ಟರ್ಸ್) ಗಳ ಕಂಡಾಗ ಅಲ್ಲಿ ಸರ್ಕಾರದ ಶಿಷ್ಟಾಚಾರದ ಉಲ್ಲಂಘನೆ ಆಗಿದೆಯೇ ? ಎಂಬ ಸಂಶಯ ಮೂಡುತ್ತಿದೆ..

ಇದೊಂದು ಸರ್ಕಾರದ ರಾಜ್ಯಮಟ್ಟದ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮದ ಪ್ರಚಾರದ ಬಿತ್ತಿಚಿತ್ರ (ಪೋಸ್ಟರ್) ಗಳಲ್ಲಿ, ಸಚಿವರು ತಮ್ಮ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚನ್ನಾರಾಜ್ ಹಟ್ಟಿಹೊಳಿ ಅವರ ಭಾವಚಿತ್ರ ಹಾಕಿಸಿದ್ದು, ಶಿಷ್ಟಾಚಾರ ಉಲ್ಲಂಘನೆ ಮಾಡಿ, ಸೋದರ ವಾತ್ಸಲ್ಯ ಮೆರೆದು, ರಾಜಕೀಯ ಪ್ರಚಾರ ಪಡೆಯುತ್ತಿದ್ದಾರೆ ಎಂಬ ಅನುಮಾನಕ್ಕೆ ಕಾರಣವಾಗಿದೆ…

ಪ್ರಚಾರದ ಪೋಸ್ಟರದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಸಚಿವರು, ಇಲಾಖೆಯ ಸಚಿವರು ಓಕೆ, ಆದರೆ ಎಂಎಲ್ಸಿ ಯಾಕೆ? ಪಕ್ಷದ ಹಾಗೂ ಜಿಲ್ಲೆಯ ಎಂಎಲ್ಸಿ ಅಂದುಕೊಂಡರೆ, ಜಿಲ್ಲೆಯ ಇನ್ನೊಬ್ಬ ಎಂಎಲ್ಸಿ, ಹಿರಿಯರು, ಅನುಭವಿಗಳಾದ ಪ್ರಕಾಶ ಹುಕ್ಕೇರಿ ಅವರ ಭಾವಚಿತ್ರವೂ ಇರಬೇಕ್ಕಿತ್ತಲ್ಲ? ಇವರದಷ್ಟೇ ಯಾಕೇ ? ಎಂಬ ಪ್ರಶ್ನೆಗಳೂ ಸಾಮಾನ್ಯರಲ್ಲಿ ಹುಟ್ಟುವದು ಸಹಜ..

ಅದೇನೇ ಇದ್ದರೂ ರಾಜ್ಯದ ಜನರಿಗೆ ಒಳಿತು ಮಾಡುವ ಸರ್ಕಾರದ ಇಂತಹ ಮಹತ್ವದ ಕಾರ್ಯಕ್ರಮದ ಪ್ರಚಾರದ ವೇಳೆ ಇಂತಹ ಸೂಕ್ಷ್ಮ ವಿಷಯಗಳನ್ನು ಗಮನಿಸಿ, ಸರ್ಕಾರಕ್ಕೆ ಆಗುವ ಮುಜುಗರವನ್ನು ತಡೆಯಬೇಕು ಎನ್ನುವದು ಜನಸಾಮಾನ್ಯರ ಅಭಿಮತ.

Leave a Comment

Your email address will not be published. Required fields are marked *

error: Content is protected !!