ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ವಿಶ್ವ ಮಟ್ಟದಲ್ಲಿ ಹೆಮ್ಮೆ ಪಡುವ ಸಾಧನೆ ಮಾಡಿದೆ: ಡಾ ಸತೀಶ್ ಕುಮಾರ್ ಹೊಸಮನಿ.

Share the Post Now

ಜಪಾನಿನಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಾರಂಭ

ಬೆಳಗಾವಿ:ನರಿಟಾ – ಜಪಾನ್: ನಮ್ಮ ಕರ್ನಾಟಕದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಇಂದು ವಿಶ್ವ ಮಟ್ಟದಲ್ಲಿ ಹೆಮ್ಮೆ ಪಡುವ ಸಾಧನೆ ಮಾಡುತ್ತಿದೆ, ಅತ್ಯಂತ ಹೆಚ್ಚು ಓದುಗರು ನೋಂದಣಿ ಆಗಿ, ಅದು ವಿಶ್ವದಾಖಲೆಯತ್ತ ಮುನ್ನುಗ್ಗುತ್ತಿದೆ ಎಂದು ಡಾ.ಸತೀಶ್ ಕುಮಾರ್ ಹೊಸಮನಿ,ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ ಅವರು ಹೇಳಿದರು. ಜಪಾನಿನ ಟೋಕಿಯೋ ಸಮೀಪದ ನರಿಟಾ ನಗರದ ಕ್ರೇನ್ ಬಾಂಕ್ವೆಟ್ ಸಭಾಂಗಣದಲ್ಲಿ ದಿನಾಂಕ 7ರಂದು ಜರುಗಿದ 37ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ. ಸೌರಭ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಮುಂದುವರೆದು ಕರ್ನಾಟಕವು ಡಿಜಿಟಲ್ ಗ್ರಂಥಾಲಯದಲ್ಲಿ ವಿಶ್ವ ಮಟ್ಟದಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿ ದಾಖಲೆ ಮಾಡಿ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದೆ. ಇಲ್ಲಿಯವರೆಗೆ 3 ಕೋಟಿ 35 ಲಕ್ಷ ಕ್ಕಿಂತ ಹೆಚ್ಚಿನ ಓದುಗರು ನೋಂದಣಿಯಾಗಿ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.ಜಪಾನಿನ ಕನ್ನಡಿಗರು ಸಹ ತಮ್ಮ ಹೆಸರು ನೋಂದಾಯಿಸಿಕೊಂಡು ಉಚಿತವಾಗಿ ಸೇವೆಯನ್ನು ಪಡೆದುಕೊಳ್ಳುವಂತೆ ಕೋರಿದರು


ಶಿವಗಂಗಾ ಕ್ಷೇತ್ರ ಮೇಲಣ ಗವಿಮಠದ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಆವರು ಆಶೀರ್ವಾಚನ ನೀಡಿದರು. ಸಮಾರಂಭದಲ್ಲಿ ವಿಜಾಪುರದ ಡಾ. ನಾಗೂರ್ ಎಜುಕೇಶನ್ ಟ್ರಸ್ಟ್ ನ ಮ್ಯಾನೇಂಗ್ ಟ್ರಸ್ಟೀ ಹಾಗೂ ಇಂಢಿಯಾ ಮಾಸ್ಟರ್ ಅಥ್ಲೆಟಿಕ್ಸ್ ಫೆಡೆರೇಷನ್ ಅಧ್ಯಕ್ಷ ರಾದ ಡಾ. ಕೆ. ಬಿ. ನಾಗೂರ್, ಐ.ಸಿ.ಎಫ್.ಸಿ (ಐ) ಅಧ್ಯಕ್ಷ, ಕೆ.ಪಿ. ಮಂಜುನಾಥ್ ಸಾಗರ್ ಅವರು,ಟೋಕಿಯೋ ಅನಿವಾಸಿ ಉದ್ಯಮಿ ರವಿ ರಾಮಕೃಷ್ಣ, ಜಪಾನ್ ನ್ಯಾಶನಲ್ ಇನ್ಸಿಟ್ಯೂಟಿನ ಸಂಶೋಧನಾ ವಿಜ್ಞಾನಿ ಮನು ಮಳ್ಳಹಳ್ಳಿ, ಮೈಸೂರಿನ ನಿವೃತ್ತ ಪ್ರೊ. ಆರ್. ಎನ್. ಜಗದೀಶ್, ಸ್ವಾಮಿ ಎಂಟರ್ಪ್ರೈಸಸ್ ಎಂ.ಡಿ. ಗೋ.ನಾ. ಸ್ವಾಮಿ, ಬೆಂಗಳೂರಿನ ಮೈಕ್ರಾನ್ ಎಲೆಕ್ಟ್ರೀಕಲ್ಸ್ ಡೈರೆಕ್ಟರ್(ಪ್ರೊಜೆಕ್ಟ್) ಡಾ. ವಿ. ನಾಗರಾಜು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ ಶಂಕ್ರೆ ಗೌಡ ಮೈಸೂರು, ಡಾ| ವಿ. ನಾಗರಾಜು ಬೆಂಗಳೂರು, ಡಾ| ಸತೀಶ್ ಕುಮಾರ್ ಹೊಸಮನಿ,ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕರ್ನಾಟಕ, ಪ್ರಭಾ ಸುವರ್ಣ ಮುಂಬಯಿ ಮತ್ತು ಕೃಷ್ಣ ಬಿ. ಶೆಟ್ಟಿ ಮುಂಬಯಿ ಇವರಿಗೆ “ಚೇರಿ ಬ್ಲೋಸಮ್ ಅವಾರ್ಡ್ 2023” ಪ್ರಧಾನ ಮಾಡಲಾಯಿತು.
ಹುಬ್ಬಳ್ಳಿಯ ನೃತ್ಯಾಂಜಲಿ ನೃತ್ಯ ಕಲಾ ಕೇಂದ್ರದ ಕಲಾವಿದರಾದ ವಿದುಷಿ ಸಿರಿ ಕಿಣಿ, ವಿದುಷಿ ಡಾ| ಮೇಘನಾ ಮತ್ತು ದಿಶಾ ನಾಯಕ್ ನೃತ್ಯ ಪ್ರದರ್ಶನ ನೀಡಿದರು.
ಡಾ| ಆಶೋಕ್ ನರೋಡೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. ಕವಿಗಳಾದ ಎಂ.ಪಿ. ವರ್ಷ ಮೈಸೂರು, ಗೋವಿಂದ ರಾವ್ ಮೂರ್ತಿ ಮತ್ತು ಪ್ರಭಾ ಸುವರ್ಣ ಸ್ವರಚಿತ ಕವನಗಳನ್ನು ವಾಚಿಸಿದರು.

Leave a Comment

Your email address will not be published. Required fields are marked *

error: Content is protected !!