ದಿಲ್ಲ್ಯಾಗ್ ಮೋದಿ..ಅಥಣ್ಯಾಗ್ ಸವದಿ ಘೋಷಣೆ ಮೊಳಗಿಸಿ ಅಭಿಮಾನಿಗಳು!

Share the Post Now

ವರದಿ :ರಾಶಿದ್ ಶೇಖ.ಅಥಣಿ

ಬೆಳಗಾವಿ. ಅಥಣಿ

ಬೃಹತ್ ಸಭೆಯ ಮೂಲಕ ರೈತ ನಾಯಕ ಲಕ್ಷ್ಮಣ ಸವದಿಯವರ ಬೆನ್ನಿಗಿದ್ದೇವೆ ಎಂದುಸಾರಿದ ಲಿಂಗಾಯತ ಪಂಚಮಸಾಲಿ ಬಾಂಧವರು

ನಿಮ್ಮೊಂದಿಗೆ ನಾವಿದ್ದೇವೆ ಸಾಹುಕಾರ‍್ರೀ.. *ನೀವು ನಮಗೆ ಬೇಕೆ ಬೇಕು..

ಬೆಳಗಾವಿ : ಸಹಕಾರಿ ಧುರೀಣರು, ರೈತ ನಾಯಕ ಹಸಿರುಕ್ರಾಂತಿ ಹರಿಕಾರರು, ಅಥಣಿ ಮತಕ್ಷೇತ್ರದ ಅಭಿವೃದ್ಧಿಹರಿಕಾರ ಸರ್ವ ಧರ್ಮಗಳ ಜನಮೆಚ್ಚಿದ ನಾಯಕರು, ಮಾಜಿ ಉಪಮುಖ್ಯಮಂತ್ರಿಗಳು, *ವಿಧಾನ ಪರಿಷತ್ ಸದಸ್ಯರಾದ ಶ್ರೀ ಲಕ್ಷ್ಮಣ ಸಂ. ಸವದಿಯವರನ್ನು* ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಬೆಂಬಲಿಸುವ ಉದ್ದೇಶದಿಂದ ಪಟ್ಟಣದ ಶಿವಣಗಿ ಕಲ್ಯಾಣ ಮಂಟಪದಲ್ಲಿ ಗುರುವಾರ ದಂದು ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರಿಂದ ಬೃಹತ್ ಸಭೆ ಜರುಗಿತು.*
ಈಗಾಗಲೇ ಮುಸ್ಲಿಂ ಸಮಾಜ ಬಾಂಧವರು ಸೇರಿದಂತೆ ಹಲವು ಸಮಾಜ ಬಾಂಧವರು ಲಕ್ಷ್ಮಣ ಸಂ. ಸವದಿಯವರ ಪರ ಬೆಂಬಲಾರ್ಥವಾಗಿ ಕ್ಷೇತ್ರದಲ್ಲಿ ಸಭೆ ನಡೆಸಿ ಒಕ್ಕೋರಲಿನ ಧ್ವನಿ ಮೊಳಗಿಸಿದ್ದಾರೆ. ಅದರಂತೆ ಈಗ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಬೃಹತ್ ಸಭೆ ಮೂಲಕ ಅಮೂಲಾಗ್ರ ಅಭಿವೃದ್ಧಿ ಕಾರ್ಯಗಳ ಮೂಲಕ ಅಥಣಿ ಮತಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ ನಿಜವಾದ ಅಭಿವೃದ್ಧಿ ಹರಿಕಾರ, ಆಧುನಿಕ ಭಗೀರಥರೆಂದೇ ಜನಮನದಲ್ಲಿ ಹೆಸರಾದ ರೈತ ನಾಯಕರಾದ ಲಕ್ಷ್ಮಣ ಸಂ. ಸವದಿಯವರ ಮೇಲೆ ತಾವು ಹೊಂದಿರುವ ಪ್ರೀತಿ, ವಿಶ್ವಾಸ ವ್ಯಕ್ತಪಡಿಸಿದರು.
ಜಾತಿ, ಧರ್ಮಗಳ ಹೆಸರಲ್ಲಿ ಎಂದೂ ರಾಜಕಾರಣ ಮಾಡದೇ, ಸರ್ವ ಧರ್ಮಗಳ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತ ಬಂದಿರುವ, ಹೃದಯವಂತ ರಾಜಕಾರಣಿಯಂದೇ ಪ್ರಖ್ಯಾತಿಯಾಗಿರುವ ರಾಜ್ಯದ ಪ್ರಭಾವಿ ನಾಯಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರಿಗೆ ನಮ್ಮ ಬೆಂಬಲ ಯಾವತ್ತೂ ಇದೆ. ನೀವು ಚುನಾವಣೆಗೆ ಸ್ಪರ್ಧಿಸಬೇಕು. ನಿಮ್ಮನ್ನು ಆಯ್ಕೆಗೊಳಿಸಿಯೇ ತೀರುತ್ತೇವೆ ಎಂದು ಹೇಳಿದರು.

ಲಕ್ಷ್ಮಣ ಸಂ. ಸವದಿಯವರು ಮಾತನಾಡಿಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಸರ್ಕಾರದ ಮಟ್ಟದಲ್ಲಿ ಮೊದಲು ಧ್ವನಿ ಎತ್ತಿದ್ದೇ ನಾನು. ಆದರೆ, ಕೆಲವರು ಇದರಲ್ಲಿ ರಾಜಕೀಯ ಮಾಡಲು ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಈಗ ನಮ್ಮ ಸರ್ಕಾರ ಮಹಾರಾಷ್ಟ್ರ ಮಾದರಿಯಲ್ಲಿ ಪಂಚಮಸಾಲಿ ಸಮಾಜಕ್ಕೆ ಅನುಕೂಲವಾಗುವಂತೆ ಮೀಸಲಾತಿ ಒದಗಿಸಿದೆ. ನನ್ನ ರಾಜಕೀಯ ಬದುಕಿನಲ್ಲಿ ಪಂಚಮಸಾಲಿ ಸಮಾಜದ ಋಣ ಬಹಳಷ್ಟಿದೆ. ಅದನ್ನು ನಾನು ಎಂದೂ ಮರೆಯುವುದಿಲ್ಲ. ನಿಮ್ಮ ಸೇವೆಗಾಗಿ ಮತ್ತೆ ನನಗೆ ಸಹಕಾರ, ಬೆಂಬಲ ಅಗತ್ಯವಿದೆ. ಚುನಾವಣೆಯಲ್ಲಿ ತಾವೆಲ್ಲರೂ ನನ್ನನ್ನು ಬೃಹತ್ ಮತಗಳ ಅಂತರದಿಂದ ಗೆಲ್ಲಿಸುವ ಅಛಲ ವಿಶ್ವಾಸ ನನಗಿದೆ ಎಂದರು. ಬೃಹತ್ ಸಂಖ್ಯೆಯಲ್ಲಿ ಸೇರಿ ಬೆಂಬಲ ವ್ಯಕ್ತಪಡಿಸಿದ ತಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರು, ಸಮಾಜ ಬಾಂಧವರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಪಂಚಮಸಾಲಿ ಸಮಾಜವು ಲಕ್ಷ್ಮಣ ಸವದಿಯವರ ಬೆನ್ನಿಗೆ ನಿಂತಿದೆ ಎನ್ನುವುದಕ್ಕೆ ಸಾಕ್ಷಿಯಾದಂತಿತ್ತು.

Leave a Comment

Your email address will not be published. Required fields are marked *

error: Content is protected !!