ವರದಿ: ಸಂಜೀವ ಬ್ಯಾಕುಡೆ, ಕುಡಚಿ
ಕುಡಚಿ
ಬರುವ ನವೇಂಬರ 26ರಂದು ದೇಹಲಿಯಲ್ಲಿ ನಡೆಯುವ ಹದಿನಾರನೇ ಹಣಕಾಸು ಆಯೋಗ ಆಯೋಜಿಸಿರುವ ಸಮ್ಮೇಳನಕ್ಕೆ ಕುಡಚಿ ಪುರಸಭೆ ಅಧ್ಯಕ್ಷ ಹಮೀದೋದ್ದಿನ ರೋಹಿಲೆ ಅವರನ್ನು ನಿಯೋಜಿಸುವಂತೆ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ನಿರ್ದೇಶಕ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸಿಪಾರಸ್ಸು ಮಾಡಿದ್ದಾರೆ.
ಭಾರತ ಸರ್ಕಾರ, ಹದಿನಾರನೇ ಹಣಕಾಸು ಆಯೋಗ, ನವದೆಹಲಿಯವರ ಜಂಟಿ ಕಾರ್ಯದರ್ಶಿ ಉಲ್ಲೇಖದನ್ವಯ ನವೇಂಬರ 26ರಂದು ದೇಹಲಿಯಲ್ಲಿ ಜರುಗಲಿರುವ ಒಂದು ದಿನದ ಚುನಾಯಿತ ಮೇಯರ್‌ಗಳು/ಅಧ್ಯಕ್ಷರ ನಿಯೋಗ “ಭಾರತದಲ್ಲಿ ನಗರ ಸ್ಥಳೀಯ ಸರ್ಕಾರಗಳನ್ನು ಬಲಪಡಿಸುವ ಕುರಿತು ಮೇಯರ್‌ಗಳು ಮತ್ತು ಅಧ್ಯಕ್ಷರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗಿಯಾಗಲು, ನಗರಗಳ ಮೇಯರ್ ಮತ್ತು ಅಧ್ಯಕ್ಷರ ಹುದ್ದೆಯನ್ನು ಹೊಂದಿರುವ ಕರ್ನಾಟಕ ರಾಜ್ಯದ ಚುನಾಯಿತ ಪ್ರತಿನಿಧಿಯಾಗಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ ಕುಮಾರ ಹಾಗೂ ರಾಯಬಾಗ ತಾಲೂಕಿನ ಕುಡಚಿ ಪುರಸಭೆ ಅಧ್ಯಕ್ಷ ಹಮೀದೋದ್ದಿನ ರೋಹಿಲೆಯವರನ್ನು ನಿಯೋಜಿಸಿ ಅಗತ್ಯ ಆದೇಶ ಹೊರಡಿಸಲು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರ ನಿರ್ದೇಶಕರು ಶಿಫಾರಸ್ಸು ಮಾಡಿದ್ದಾರೆ.