ಮೂಡಲಗಿ .
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡಲಗಿ ಕಛೇರಿ ವತಿಯಿಂದ ಮೂಡಲಗಿ ಪೊಲೀಸ ಠಾಣೆಗೆ ಗಣಕಯಂತ್ರ(ಲ್ಯಾಪಟಾಪ್) ವನ್ನು ದೇಣಿಗೆಯನ್ನು ಉಚಿತವಾಗಿ ಪೊಲೀಸ್ ಠಾಣೆಯ ಪಿ ಎಸ್ ಐ ಹಾಲಪ್ಪ ಬಾಲದಂಡಿ ಅವರಿಗೆ ಹಸ್ತಾಂತರಿಸಲಾಯಿತು.
ಪಿ ಎಸ್ ಐ ಹಾಲಪ್ಪ ಬಾಲದಂಡಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜದ ಬಡ ಕುಟುಂಬಗಳ ಹಾಗೂ ಸಮಾಜ ಉದ್ದಾರಕ್ಕೆ ಸಹಕಾರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಜಿಲ್ಲಾ ನಿರ್ದೇಶಕರಾದ ನಾಗರತ್ನಾ ಹೆಗಡೆ.ಮೂಡಲಗಿ ತಾಲೂಕಾ ಯೋಜನಾಧಿಕಾರಿ ರಾಜು ನಾಯ್ಕ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ. ಮೂಡಲಗಿ ನಗರ ಮೇಲ್ವಿಚಾರಕಿ ಕಾಮಾಕ್ಷಿ. ಸಹಾಯಕ ವ್ಯವಸ್ಥಾಪಕರು ಪರಶುರಾಮ. ಲೆಕ್ಕ ಪರಿಶೋಧಕ ಹನುಮೇಶ. ಕಛೇರಿ ಸಹಾಯಕರು ನಾಗೇಶ. ಪ್ರವೀಣ.ಎ ಏಸ್ ಐ,ಎಂ ಬಿ ನದಾಫ.ಪೋಲಿಸ ನಾಗಪ್ಪ ಒಡೆಯರ. ಎಂ ವಾಯ ನದಾಫ ಸೇರಿದಂತೆ ಪೊಲೀಸ ಠಾಣೆಯ ಸಿಬ್ಬಂದಿಗಳಿದ್ದರು.