2023ರ ಕಳೆದ ಮೇ ತಿಂಗಳಲ್ಲಿ ಜರುಗಿದ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ಅತ್ಯುತ್ತಮ ಸೇವೆ ಹಾಗೂ ದಕ್ಷತೆಯಿಂದ ಕೂಡಿರುವ ಕಾರ್ಯವನ್ನು ಗಮನಿಸಿ ಬೆಳಗಾವಿ ಜಿಲ್ಲಾ ಅಧೀಕ್ಷಕ ಸಂಜೀವ ಪಾಟೀಲ ಅಧಿಕಾರಿಗಳಿಗೆ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹಿಸಿದರು.
ಇದರಲ್ಲಿ ಅಥಣಿ ಉಪ ಅಧೀಕ್ಷಕರಾದ ಶ್ರೀಪಾದ ಜಲ್ದೆ, ಹಾರೂಗೇರಿ ವೃತ್ತ ನಿರೀಕ್ಷಕರಾದ ರವಿಚಂದ್ರನ್ ಬಡಫಕೀರಪ್ಪಗೋಳ ಹಾಗೂ ಹಾರೂಗೇರಿ ಉಪನಿರೀಕ್ಷಕರಾದ ರೇಣುಕಾ ಜಕನೂರ ಪ್ರಶಂಸೆಗೆ ಪಾತ್ರರಾಗಿ ಪ್ರಶಂಸನಾ ಪ್ರಮಾಣ ಪತ್ರ ಪಡೆದುಕೊಂಡು ದಕ್ಷತೆ ಮೆರೆದಿದ್ದಾರೆ.
ವರದಿ: ಸಂಜೀವ ಬ್ಯಾಕುಡೆ,





