ಗಂಗಾವತಿ:ಚುನಾವಣೆ ಕಾರ್ಯ ನಿಮಿತ್ಯ ನಗರಕ್ಕೆ ಆಗಮಿಸಿರುವ ಅರೆ ಸೇನಾ ಪಡೆಗೆ ಹಂಚಲು, ವೈಯಕ್ತಿಕವಾಗಿ ಸುಮಾರು ಒಂದು ಸಾವಿರ ಓ.ಆರ್.ಎಸ್.ಪೌಡರ್ ಗಳ ಸಾಚೆಟ್ ಗಳನ್ನು ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಪೋಲೀಸ್ ಸಿಬ್ಬಂದಿಗೆ ಬುಧುವಾರ ನೀಡಿದರು.
ಈ ಸಂಧರ್ಭದಲ್ಲಿ ಶ್ರೀಮತಿ ಸಂಧ್ಯಾ ಪಾರ್ವತಿ, ರಾಜಶೇಖರಯ್ಯ ಭಾನಾಪೂರ, ಸಿ.ಚಿದಾನಂದ ಉಪಸ್ಥಿತರಿದ್ದರು.
ಕಳೆದ ಸೋಮವಾರ ಪೋಲೀಸ್ ಸಿಬ್ಬಂದಿಗೆ ಹಂಚಲು, ಔಷಧ ವ್ಯಾಪಾರಿಗಳ ಸಂಘದಿಂದ ಒಟ್ಟು 2000 ಸಾಚೆಟ್ ಗಳನ್ನು ನೀಡಲಾಗಿತ್ತು.
ಸುಡು ಬಿಸಿನಲ್ಲಿ ಕಾರ್ಯನಿರ್ವಹಿಸುವ ಪೋಲೀಸ್ ಮತ್ತು ಸೇನಾ ಪಡೆಯವರಿಗೆ ದೇಹವು ಡಿ ಹೈಡ್ರೆಷನ್ ಆಗುವುದನ್ನು ತಪ್ಪಿಸಲು ಓ.ಆರ್.ಎಸ್.ಪೌಡರ್ ಗಳನ್ನು ನೀಡಲಾಗಿದೆ ಎಂದು ಅಶೋಕಸ್ವಾಮಿ ಹೇರೂರ ಈ ಸಂಧರ್ಭದಲ್ಲಿ ತಿಳಿಸಿದರು.